ದಾಂಪತ್ಯದ ಒಂದು ಭಾಗ. ಸುಖಕರ ದಾಂಪತ್ಯಕ್ಕೆ ಸೆಕ್ಸ್ ಅತ್ಯವಶ್ಯಕ. ಸಾಮಾನ್ಯವಾಗಿ ಮಹಿಳೆಗಿಂತ ಪುರುಷರು ಸೆಕ್ಸ್ ಜೀವನದ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿರುತ್ತಾರೆಂಬ ನಂಬಿಕೆಯಿದೆ. ಹಾಗಂತ ಸದಾ ಪುರುಷರೇ ಸಂಭೋಗಕ್ಕೆ ಮುನ್ನುಡಿ ಬರೆಯಬೇಕೆಂದೇನೂ ಇಲ್ಲ. ಮಹಿಳೆಯಾದವಳು ಕೂಡ ತನ್ನ ಆಸೆಯನ್ನು ವ್ಯಕ್ತಪಡಿಸಬಹುದು. ಸಂಭೋಗಕ್ಕೆ ಸಂಗಾತಿಯನ್ನು ಪ್ರಚೋದಿಸಬಹುದು.
ಅನೇಕ ವರ್ಷಗಳ ಹಿಂದೆ ನಡೆದ ಸಮೀಕ್ಷೆಯೊಂದರಲ್ಲಿ ಶೇಕಡಾ 75 ರಷ್ಟು ಮಹಿಳೆಯರು ವಾರದಲ್ಲಿ ಮೂರು ದಿನ ಸೆಕ್ಸ್ ಬಯಸುವುದಾಗಿ ಒಪ್ಪಿಕೊಂಡಿದ್ದರು. ಶೇಕಡಾ 13ರಷ್ಟು ಮಹಿಳೆಯರು ವಾರದಲ್ಲಿ 6 ಬಾರಿ ಸೆಕ್ಸ್ ಬಯಸುವುದಾಗಿ ಹೇಳಿದ್ದರು. ಮಹಿಳೆಯರು ಲೈಂಗಿಕ ಕ್ರಿಯೆಯನ್ನು ಆರಂಭಿಸಿದ್ರೆ ಸಾಕಷ್ಟು ಲಾಭವಿದೆ.
ಕೆಲ ಮಹಿಳೆಯರ ಪ್ರಕಾರ ಇದು ಅವ್ರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆಯಂತೆ. ತನ್ನಿಷ್ಟದಂತೆ ನಡೆದುಕೊಂಡ ಸಂಗಾತಿ ಎಂಬ ನೆಮ್ಮದಿ ಜೊತೆ ಆತ್ಮವಿಶ್ವಾಸ ಮೂಡುತ್ತದೆಯಂತೆ.
ಸಾಮಾನ್ಯವಾಗಿ ಮಹಿಳೆಯರು ಏನು ಬಯಸ್ತಾರೆ ಎಂಬ ಸಂಗತಿ ಪುರುಷರಿಗೆ ತಿಳಿಯುವುದಿಲ್ಲ. ಇಂಥ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಬಯಕೆಯನ್ನು ಸಂಗಾತಿ ಮುಂದೆ ಹೇಳುವುದು ಅವಶ್ಯಕ. ಇದು ಸಂಗಾತಿಗಳಲ್ಲಿ ಉತ್ತೇಜನ ಹೆಚ್ಚಿಸಲು ಕಾರಣವಾಗುತ್ತದೆ.
ಆಪ್ತತೆ ಹೆಚ್ಚಾಗುತ್ತದೆ. ಪುರುಷರಿಗೆ ಸಂಗಾತಿಯಾದವಳು ತಾನಾಗಿಯೇ ಹತ್ತಿರ ಬಂದಾಗ ಖುಷಿ ದುಪ್ಪಟ್ಟಾಗುತ್ತದೆ. ಇಬ್ಬರ ನಡುವೆ ಒಂದು ಹೊಂದಾಣಿಕೆ ಗೊತ್ತಿಲ್ಲದೆ ಚಿಗುರೊಡೆಯುತ್ತದೆ.
ಲೈಂಗಿಕ ಕ್ರಿಯೆ ವೇಳೆಯೂ ಕೆಲವೊಮ್ಮೆ ಪುರುಷರು ಒತ್ತಡಕ್ಕೊಳಗಾಗಿರುತ್ತಾರೆ. ಆದ್ರೆ ಸಂಗಾತಿ ತಾನಾಗಿಯೇ ಹತ್ತಿರ ಬಂದಾಗ ಅವ್ರ ಒತ್ತಡ ಕಡಿಮೆಯಾಗುತ್ತದೆ. ಸಂಭೋಗದಲ್ಲಿ ಸಂತೋಷದ ಹಾರ್ಮೋನ್ ಬಿಡುಗಡೆ ಹೆಚ್ಚಾಗುತ್ತದೆ. ಸಂಭೋಗ ಒಂದು ಸ್ಪರ್ಧೆಯಲ್ಲ. ಅದೊಂದು ಸಂತೋಷ, ಆನಂದ ನೀಡುವ ಕ್ರಿಯೆ ಎಂಬುದು ದಂಪತಿಗೆ ಅರಿವಿದ್ದಲ್ಲಿ ದಾಂಪತ್ಯ ಸುಖಕರವಾಗಿರುತ್ತದೆ.