ದಿನಾ ಅನ್ನ ಸಾರು ತಿಂದು ಬೇಜಾರು ಎಂದುಕೊಳ್ಳುವವರು ಎಗ್ ಮತ್ತು ಗಾರ್ಲಿಕ್ ಫ್ರೈಡ್ ರೈಸ್ ಮಾಡಿಕೊಂಡು ತಿನ್ನಬಹುದು. ಇದನ್ನು ಮಾಡುವುದಕ್ಕೂ ಕೂಡ ಸುಲಭ ಹಾಗೂ ರುಚಿಕರವಾಗಿರುತ್ತದೆ. ರಾತ್ರಿ ಮಿಕ್ಕಿದ ಅನ್ನದಲ್ಲಿ ಕೂಡ ಇದನ್ನು ಮಾಡಬಹುದು. ಬೆಳಗ್ಗಿನ ತಿಂಡಿ, ಲಂಚ್ ಬಾಕ್ಸ್ ಗೂ ಇದು ಹೇಳಿ ಮಾಡಿಸಿದ್ದು.
ಬೇಕಾಗುವ ಸಾಮಾಗ್ರಿಗಳು: 2 ಟೇಬಲ್ ಸ್ಪೂನ್-ಎಣ್ಣೆ, 1 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಕತ್ತರಿಸಿದ್ದು, 2 ಟೀ ಸ್ಪೂನ್ ಸ್ಪ್ರಿಂಗ್ ಆನಿಯನ್, 1 ಟೀ ಸ್ಪೂನ್-ಶುಂಠಿ ಸಣ್ಣಗೆ ಕತ್ತರಿಸಿದ್ದು, 1 ಮೊಟ್ಟೆ, 2 ಕಪ್ ಅನ್ನ ಬೇಯಿಸಿದ್ದು, ರುಚಿಗೆ ತಕ್ಕಷ್ಟು ಉಪ್ಪು, 1 ಟೀ ಸ್ಪೂನ್-ಕಾಳು ಮೆಣಸಿನ ಪುಡಿ, 1 ಟೀ ಸ್ಪೂನ್ ಸೋಯಾ ಸಾಸ್.
ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಡಿ ಅದಕ್ಕೆ ಕತ್ತರಿಸಿಟ್ಟುಕೊಂಡು ಬೆಳ್ಳುಳ್ಳಿ ಹಾಕಿ ನಂತರ ಈರುಳ್ಳಿ, ಶುಂಠಿ ಹಾಕಿ ಕೈಯಾಡಿಸಿ.ನಂತರ ಒಂದು ಮೊಟ್ಟೆಯನ್ನು ಒಡೆದು ಮಿಕ್ಸ್ ಮಾಡಿ.
ಇದು ತುಸು ಬೆಂದ ನಂತರ ಅನ್ನವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಸೋಯಾ ಸಾಸ್, ಸ್ಪ್ರಿಂಗ್ ಆನಿಯನ್ ಸೇರಿಸಿ ಚೆನ್ನಾಗಿ ಕೈಯಾಡಿಸಿದರೆ ರುಚಿಕರವಾದ ಎಗ್ ಗಾರ್ಲಿಕ್ ಫ್ರೈಡ್ ರೈಸ್ ಸವಿಯಲು ಸಿದ್ಧ.