ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
¾ ಕಪ್ – ಕ್ಯಾಪ್ಸಿಕಂ ಹೋಳು, ಒಣಮೆಣಸು – 2, ಕಡಲೆಬೇಳೆ – 2 ಟೇಬಲ್ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಹುಣಸೆಹಣ್ಣು – 1 ಟೀ ಸ್ಪೂನ್, ತೆಂಗಿನಕಾಯಿ ತುರಿ – 3 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್, ಎಣ್ಣೆ – 1/2 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು. ಇನ್ನು ಒಗ್ಗರಣೆಗೆ: ಎಣ್ಣೆ – 1 ಟೀ ಸ್ಪೂನ್, ಸಾಸಿವೆ – 1/4 ಟೀ ಸ್ಪೂನ್, ಕರಿಬೇವು – 5 ಎಸಳು.
ಮಾಡುವ ವಿಧಾನ:
ಬಾಣಲೆಯಲ್ಲಿ 1 ಟೀ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಕಡಲೆಬೇಳೆ, ಒಣಮೆಣಸು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಕ್ಯಾಪ್ಸಿಕಂ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಹುಣಸೆಹಣ್ಣು, ಕೊತ್ತಂಬರಿಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.
ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ತುಸು ನೀರು ಸೇರಿಸಿ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.