ಉರ್ಫಿ ಜಾವೇದ್. ಇವರ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ವಿಭಿನ್ನ ಬಟ್ಟೆಯನ್ನು ತೊಡುವ ಮೂಲಕ ಸಕ್ಕತ್ ಟ್ರೋಲ್ ಆಗೋ ಬೆಡಗಿ. ಈಕೆ ಮನೆಯಿಂದ ಆಚೆ ಬರ್ತಾರೆ ಅಂದ್ರೆ ಸಾಕು ವಿಭಿನ್ನ ಬಟ್ಟೆಯಲ್ಲೇ ಬರೋದು. ಇದೀಗ ಮತ್ತೊಮ್ಮೆ ಉರ್ಫಿ ವಿಭಿನ್ನ ಬಟ್ಟೆ ಹಾಕಿಕೊಂಡು ಟ್ರೋಲ್ ಆಗಿದ್ದಾರೆ.
ಹೌದು, ಇತ್ತೀಚೆಗೆ ಉರ್ಫಿ ಚಿತ್ರವೊಂದರ ಸ್ಕ್ರೀನಿಂಗ್ಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದವರೆಲ್ಲಾ ಒಮ್ಮೆ ತಬ್ಬಿಬ್ಬಾಗಿದ್ದಂತೂ ನಿಜ. ಯಾಕಂದ್ರೆ ಉರ್ಫಿ ಒಳ ಉಡುಪು ಕಾಣುವ ರೀತಿ ಬಟ್ಟೆ ಹಾಕಿದ್ದರು. ಅಥ್ಲೀಶರ್ ಹಾಕಿದ್ದರೂ ಕೂಡ, ತಮ್ಮ ಒಳ ಉಡುಪುಗಳನ್ನ ಕಾಣಿಸುವ ರೀತಿ ಇತ್ತು. ಇನ್ನು ಇದನ್ನು ನೋಡಿದ ಜನ ಉರ್ಫಿ ಜಾವೇದ್ ಅವರನ್ನು ಟ್ರೋಲ್ ಮಾಡ್ತಾ ಇದ್ದಾರೆ. ಈಕೆ ತನ್ನನ್ನ ತಾನೇ ಸೂಪರ್ ವುಮನ್ ಅಂದುಕೊಂಡಿದ್ದಾಳೆ. ಘೋರ ಕಲಿಯುಗ….. ಇದೆಲ್ಲಾ ನಾವು ನೋಡಬೇಕಾ? ದಯವಿಟ್ಟು ಈಕೆಯನ್ನ ಬ್ಯಾನ್ ಮಾಡಿ ಅಂತ ನೆಟ್ಟಿಗರು ಗರಂ ಆಗಿದ್ದಾರೆ.
ಇವರು ಇದೊಂದು ಸಲವೇ ಅಲ್ಲ ಕಳೆದ ಹಲವಾರು ದಿನಗಳಿಂದ ಹೀಗೆ ಟ್ರೋಲ್ ಆಗುತ್ತಲೇ ಇದ್ದಾರೆ. ಒಡೆದ ಗಾಜಿನ ಪೀಸ್ನಲ್ಲಿ ಬಟ್ಟೆ ಹೊಲಿಸಿ ಹಾಕಿಕೊಂಡಿದ್ದರು. ಹರಿದ ಗೋಣಿ ಚೀಲ, ತುಂಡು ಬಟ್ಟೆ, ಪೇಪರ್ ಹೀಗೆ ಅನೇಕದರಲ್ಲಿ ಬಟ್ಟೆ ಹೊಲಿಸಿಕೊಂಡು ಡ್ರೆಸ್ ಮಾಡಿಕೊಂಡಿದ್ದರು.