
ಈಕೆಯ ಆಸೆಯನ್ನು ಕೇಳಿದರೆ ನೀವು ಹೌಹಾರದೇ ಇರಲಾರಿರಿ ಮತ್ತು ಬಿದ್ದು ಬಿದ್ದು ನಗದೇ ಇರಲಾರಿರಿ. ಆಕೆಯ ಮಹದಾಸೆಯೆಂದರೆ, ಈ ಆಟಿಕೆಯೊಂದಿಗೆ ಮದುವೆಯಾಗಲು ಬಯಸಿದ್ದಾಳೆ !!!
ಸಾರ ರೋಡೋ ಎಂಬ ಈ ಯುವತಿ ಇರುವುದು ಜರ್ಮನಿಯ ಡೋರ್ಟ್ ಮಂಡ್ ನಲ್ಲಿ. ಆಟಿಕೆ ಅಥವಾ ನಿರ್ಜೀವ ವಸ್ತುವಿನೊಂದಿಗೆ ಮದುವೆಯಾಗುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಆಟಿಕೆಯನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದಾಳಂತೆ.
ಆಕೆ ತನ್ನನ್ನು ತಾನು ಅಬ್ಜೆಕ್ಟಂ ಸೆಕ್ಷುವಲ್ ಎಂದು ಗುರುತಿಸಿಕೊಂಡಿದ್ದಾಳೆ. ಇದರರ್ಥ ನಿರ್ಜೀವ ವಸ್ತುವಿನೊಂದಿಗೆ ಲೈಂಗಿಕತೆ ಹೊಂದುವುದು. ಈಕೆಯ ಪ್ರಕಾರ ಈಕೆ ಪುರುಷರೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಯಲ್ಲಿ ಅವರು ತೃಪ್ತಿ ಕೊಟ್ಟಿಲ್ಲವಂತೆ !
ಇದಕ್ಕೂ ಮುನ್ನ ಈಕೆಗೆ ರೈಲೊಂದರ ಮೇಲೆ ಲವ್ ಆಗಿತ್ತು. ಇದೀಗ ಡಿಕ್ಕಿ ಎಂಬ ವಿಮಾನವನ್ನು ಲವ್ ಮಾಡುತ್ತಿದ್ದು, ಅದರ ಮುಖ, ರೆಕ್ಕೆಗಳು ಮತ್ತು ಎಂಜಿನ್ ಗಳು ಆಕೆಗೆ ಅತ್ಯಂತ ರೊಮ್ಯಾಂಟಿಕ್ ಮತ್ತು ಸೆಕ್ಸಿಯಾಗಿ ಕಾಣಿಸುತ್ತವೆ ಎಂದು ಹೇಳಿಕೊಂಡಿದ್ದಾಳೆ.