ಕೂದಲೆಲ್ಲಾ ಉದುರುತ್ತದೆ ಎಂದು ಹಲವು ಮಂದಿ ಹೆಲ್ಮೆಟ್ ಗೆ ಬಾಯ್ ಹೇಳಿದ್ದನ್ನು ನೀವು ಕೇಳಿರುತ್ತೀರಿ. ಅದರೆ ಇದೀಗ ಹೊಸ ಕಾನೂನು ಬಂದಿದ್ದು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಕೂದಲು ಉದುರದಂತೆ ಹೆಲ್ಮೆಟ್ ಧರಿಸುವುದು ಹೇಗೆ….?
ನಿಮ್ಮ ಕೂದಲು ಉದ್ದಕ್ಕಿದ್ದರೆ ಅದನ್ನು ಹಾಗೆ ಹಾರಾಡಿಸಿಕೊಂಡು ಹೋಗದಿರಿ. ಅಲ್ಲೇ ಗಂಟು ಹಾಕಿಕೊಳ್ಳಿ. ಆಹಾರ ಪದ್ಧತಿಯಲ್ಲಿ ನಿಮ್ಮ ಕೂದಲ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ.
ನಿತ್ಯ ಬಹಳ ಹೊತ್ತು ಹೆಲ್ಮೆಟ್ ಧರಿಸುವ ಅನಿವಾರ್ಯತೆ ಇದ್ದರೆ ನಿಮ್ಮ ನೆತ್ತಿಯ ಭಾಗ ವಿಪರೀತ ಬೆವರಿ ಹೊಟ್ಟಿನ ಸಮಸ್ಯೆಗೆ ಕಾರಣವಾಗಬಹುದು. ಅದರ ನಿವಾರಣೆಗೆ ತಲೆಗೆ ಹೆಲ್ಮೆಟ್ ಕೂರುವ ಜಾಗಕ್ಕೂ ಮೇಲೆ ಕಾಟನ್ ಬಟ್ಟೆ ಒಂದು ಸುತ್ತು ಕಟ್ಟಿ. ವಿಪರೀತ ಬೆವರಿದೆ ಎನಿಸಿದ ದಿನ ತಲೆಗೆ ಸ್ವಚ್ಛವಾಗಿ ಸ್ನಾನ ಮಾಡಿ.
ಅಲೋವೆರಾ, ತೆಂಗಿನೆಣ್ಣೆ, ಜೇನುತುಪ್ಪ ಮತ್ತು ಮೊಟ್ಟೆಯಿಂದ ತಯಾರಿಸಿದ ಮಿಶ್ರಣದ ಮಾಯಿಸ್ಚರೈಸರ್ ಬಳಸಿ, ಇದರಿಂದ ಹೆಲ್ಮೆಟ್ ನ ಒಳಭಾಗ ನಿಮ್ಮ ತಲೆಗೆ ತಿಕ್ಕಿದರೂ ಯಾವುದೇ ಹಾನಿ ಆಗುವುದಿಲ್ಲ. ನಿಮ್ಮ ತಲೆಗೆ ಹೊಂದಿಕೊಳ್ಳುವ ಗಾತ್ರದ ಹೆಲ್ಮೆಟ್ ಬಳಸಿ. ಭಾರೀ ಬಿಗಿಯಾದ ಹೆಲ್ಮೆಟ್ ಬಳಕೆ ಬೇಡ. ಬಳಸಿದ ಬಳಿಕ ಅದನ್ನು ಅಲ್ಲಲ್ಲಿ ಎಸೆಯದಿರಿ. ಎಚ್ಚರಿಕೆಯಿಂದ ತೆಗೆದಿಡಿ. ಒಳಭಾಗದಲ್ಲಿ ಧೂಳು, ಕೊಳೆ ಶೇಖರಣೆಯಾಗದಂತೆ ನೋಡಿಕೊಳ್ಳಿ.