ನೋಯ್ಡಾ: ಪ್ರದೀಪ್ ಮೆಹ್ರಾ ಅವರು ಮಧ್ಯರಾತ್ರಿ ಓಡುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ. ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರದೀಪ್‌ಗೆ ಹಣಕಾಸಿನ ನೆರವು ನೀಡಿದ್ದಾರೆ.
ಇದೀಗ, ರಿಟೇಲ್ ಬ್ರ್ಯಾಂಡ್ ಶಾಪರ್ಸ್ ಸ್ಟಾಪ್, ಪ್ರದೀಪ್ ತಾಯಿಯ ಚಿಕಿತ್ಸೆಗಾಗಿ 2.5 ಲಕ್ಷ ರೂ.ಗಳ ಚೆಕ್ ಅನ್ನು ವಿತರಿಸಿದೆ. ಜೊತೆಗೆ ಅವರ ಕನಸುಗಳನ್ನು ಮುಂದುವರಿಸಲು ಸಹಾಯ ಮಾಡಿದೆ. ಪ್ರದೀಪ್ ಅವರ ತಾಯಿಗೆ ಟಿಬಿ ಇದೆ. ಕಳೆದ ಎರಡು ವರ್ಷಗಳಿಂದ ದೆಹಲಿಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರದೀಪ್ ಮಧ್ಯರಾತ್ರಿ ವೇಳೆ ಓಡುತ್ತಿರುವ ವಿಡಿಯೋವನ್ನು ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಹಂಚಿಕೊಂಡಿದ್ದರು. ಇದೀಗ ಶಾಪರ್ಸ್ ಟಾಪ್ 2.5 ಲಕ್ಷ ರೂ. ನೀಡಿರೋ ಚೆಕ್ ನ ಹೃದಯಸ್ಪರ್ಶಿ ಕ್ಷಣದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಪ್ರದೀಪ್ ತನ್ನ ಭುಜದ ಮೇಲೆ ಸಣ್ಣ ಬ್ಯಾಗ್ ಮತ್ತು ಕೈಯಲ್ಲಿ ಮೊಬೈಲ್ ಫೋನ್ನೊಂದಿಗೆ ಮಧ್ಯರಾತ್ರಿಯ ಹೊತ್ತಿಗೆ ನಗರದ ರಸ್ತೆಯಲ್ಲಿ ಓಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸೇನೆಗೆ ಸೇರಲು ದೈಹಿಕವಾಗಿ ತರಬೇತಿ ಪಡೆಯುವುದಕ್ಕಾಗಿ ಬರೋಲಾದಲ್ಲಿರುವ ತನ್ನ ಮನೆಗೆ ಪ್ರತಿ ರಾತ್ರಿ 10 ಕಿ.ಮೀ ಓಡುತ್ತಿರುವುದಾಗಿ ಅವರು ತಿಳಿಸಿದ್ದರು.