alex Certify ‌ʼಆಕ್ಸಿಜನ್ʼ ಲೆವೆಲ್ ಏರಿಳಿತವಾಗಲು ಕಾರಣವೇನು…? ಇಲ್ಲಿದೆ ಎಲ್ಲರೂ ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಆಕ್ಸಿಜನ್ʼ ಲೆವೆಲ್ ಏರಿಳಿತವಾಗಲು ಕಾರಣವೇನು…? ಇಲ್ಲಿದೆ ಎಲ್ಲರೂ ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ

ಕೊರೊನಾ ಎರಡನೇ ಅಲೆ ತಂದ ಭೀತಿಯಿಂದಾಗಿ ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ಸ್ಯಾಚುರೇಷನ್ ಲೆವಲ್ ಬಗ್ಗೆ ಪ್ಯಾನಿಕ್ ಆಗಿರುವ ಸಂದರ್ಭ ಎದುರಾಗಿದೆ. ಸ್ವಲ್ಪ ಉಸಿರಾಟದಲ್ಲಿ ಏರುಪೇರಾದರೂ ಆತಂಕದಲ್ಲಿ ದಿನ ದೂಡುವಷ್ಟರ ಮಟ್ಟಿಗೆ ಆತಂಕ ಎದುರಾಗಿದೆ. ಆಕ್ಸಿಜನ್ ಸ್ಯಾಚುರೇಷನ್ ಲೆವಲ್ ಪರಿಶೀಲಿಸುವ ಪಲ್ಸ್ ಆಕ್ಸಿಮೀಟರ್ ನ್ನು ಹಲವರು ಬೆರಳಲ್ಲೇ ಇಟ್ಟುಕೊಂಡಿರುವುದನ್ನು ಗಮನಿಸಿರುತ್ತೇವೆ.

ಸ್ಯಾಚುರೇಷನ್ 70-80 ಬಂದರಂತೂ ಕಂಗಾಲಾಗುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿರುವ ಡಾ.ರಾಜು, ಸ್ಯಾಚುರೇಶನ್ ಲೆವಲ್ ಹೆಚ್ಚು ಕಡಿಮೆಯಾಗಲು ಕಾರಣವೇನು…? ದಿನಕ್ಕೆ ಎಷ್ಟು ಬಾರಿ ಸ್ಯಾಚುರೇಷನ್ ಲೆವಲ್ ಚೆಕ್ ಮಾಡಿಕೊಳ್ಳಬಹುದು ಎಂಬುದನ್ನು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.

ವ್ಯಕ್ತಿಯಲ್ಲಿ ಸ್ಯಾಚುರೇಷನ್ ಲೆವಲ್ ಏರಿಳಿತವಾಗಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಎರಡು ಕಾರಣವೆಂದರೆ ನಮ್ಮ ರಕ್ತದಲ್ಲಿನ ಅಡ್ರೆನಲಿನ್ ಮತ್ತು ಗ್ಲೂಕೊಕಾರ್ಟಿಕಾಡ್ಸ್ ಕಡಿಮೆಯಾಗುತ್ತದೆ. ಇದರಿಂದ ಸ್ಯಾಚುರೇಷನ್ ಲೆವಲ್ ಕಡಿಮೆಯಾಗುತ್ತದೆ. ವ್ಯಕ್ತಿಯಲ್ಲಿ ಪ್ರತಿದಿನ ಬೆಳಿಗ್ಗೆ ಸ್ಯಾಚುರೇಷನ್ ಲೆವಲ್ ಕಡಿಮೆಯಿದ್ದರೆ ಸಂಜೆಯಾಗುತ್ತಿದ್ದಂತೆ ಹೆಚ್ಚಿರುತ್ತದೆ.

ಇದು ಸಾಮಾನ್ಯ. ಅದರೆ ಯಾವುದೇ ವ್ಯಕ್ತಿಯಲ್ಲಿ ಸ್ಯಾಚುರೇಷನ್ ಲೆವಲ್ 70ರಷ್ಟಿದ್ದರೆ ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ. ಅಲ್ಲದೇ ಭಯ ಅಥವಾ ಆತಂಕದಲ್ಲಿದ್ದಾಗ ಪ್ರತಿಯೊಬ್ಬರಲ್ಲೂ ಸ್ಯಾಚುರೇಷನ್ ಲೆವಲ್ ಕಡಿಮೆಯಾಗುತ್ತದೆ. ಹೀಗಾಗಿ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಧೈರ್ಯದಿಂದಿರಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.

https://youtu.be/hLQrabRlJS0

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...