ಕೊರೊನಾ ವೈರಸ್ ಸೋಂಕನ್ನು ತಪ್ಪಿಸಲು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕೈ ತೊಳೆಯುವಂತೆ ಸಲಹೆ ಮಾಡಲಾಗುತ್ತದೆ. ಈಗ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಆದ್ರೆ ಇದರಿಂದ ಕೈತೊಳೆದ ತಕ್ಷಣ ಮಾಡುವ ಕೆಲಸಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.
ಹ್ಯಾಂಡ್ ಸ್ಯಾನಿಟೈಜರ್ ತಯಾರಿಸಲು ಅನೇಕ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಇದರಲ್ಲಿ ಆಲ್ಕೋಹಾಲ್ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಆದ್ದರಿಂದ ಹ್ಯಾಂಡ್ ಸ್ಯಾನಿಟೈಜರ್ನಿಂದ ಕೈಗಳನ್ನು ತೊಳೆದ ತಕ್ಷಣ ಆಹಾರ ಸೇವನೆ ಮಾಡಿದ್ರೆ ಆಲ್ಕೋಹಾಲ್ ಮತ್ತು ರಾಸಾಯನಿಕ ಅಂಶ ದೇಹವನ್ನು ಸೇರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು.
ಹ್ಯಾಂಡ್ ಸ್ಯಾನಿಟೈಜರ್ನಿಂದ ಕೈಗಳನ್ನು ಸ್ವಚ್ಛಗೊಳಿಸಿದ ತಕ್ಷಣ ಮುಖವನ್ನು ಮುಟ್ಟಿಕೊಳ್ಳಬಾರದು. ಹ್ಯಾಂಡ್ ಸ್ಯಾನಿಟೈಜರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿದ ನಂತರ ನೀವು ಮುಖವನ್ನು ಸ್ಪರ್ಶಿಸಿದರೆ ಅದು ಮುಖದ ತುರಿಕೆಗೆ ಕಾರಣವಾಗಬಹುದು. ಕೆಲವು ಜನರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಹಾಗಾಗಿ ಅಲರ್ಜಿಗೆ ಕಾರಣವಾಗಬಹುದು.
ಹ್ಯಾಂಡ್ ಸ್ಯಾನಿಟೈಜರ್ ಬಳಕೆಯಿಂದೆ ಒಳ್ಳೆ ಬ್ಯಾಕ್ಟೀರಿಯಾಗಳು ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಯಾನಿಟೈಜರ್ ಅತಿಯಾಗಿ ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿದ್ದಾಗ ಹ್ಯಾಂಡ್ ಸ್ಯಾನಿಟೈಜರ್ ಬದಲು ಸೋಪ್ ಬಳಸಿ.