ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡಲು ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ 5 ತಿಂಗಳು ಜಿಮ್ ಬಾಗಿಲು ಹಾಕಿತ್ತು. ಮಕ್ಕಳು ಮನೆಯಲ್ಲಿರುವ ಕಾರಣ ಮಹಿಳೆಯರಿಗೆ ಈಗ್ಲೂ ಜಿಮ್ ಗೆ ಹೋಗಲು ಸಾಧ್ಯವಾಗ್ತಿಲ್ಲ. ಕೊರೊನಾ ಕಾಲದಲ್ಲಿ ತೂಕ ಹೆಚ್ಚಾಗಿದೆ ಎನ್ನುವವರು ಮನೆಯಲ್ಲೇ ತೂಕ ಇಳಿಸಿಕೊಳ್ಳಬಹುದು.
ಎಲ್ಲ ಕೆಲಸದ ಮಧ್ಯೆ ಸ್ವಲ್ಪ ಸಮಯವನ್ನು ನಿಮಗಾಗಿ ನೀಡುವ ಅಗತ್ಯವಿದೆ. ಪ್ರತಿ ದಿನ ಒಂದು ನಿರ್ದಿಷ್ಟ ಸಮಯದಲ್ಲಿ ನೀವು ವಾಕ್ ಮಾಡಬೇಕು. ವಾಕ್ ನಿಮ್ಮ ಬೊಜ್ಜು ಕರಗಿಸಲು ನೆರವಾಗುತ್ತದೆ. ಪಾರ್ಕ್ ಗೆ ಹೋಗಿ ವಾಕ್ ಮಾಡಬೇಕಾಗಿಲ್ಲ. ಮನೆಯೊಳಗೆ ನಡೆದಾಡಬಹುದು. ಅಥವಾ ಟೆರೆಸ್ ಮೇಲೆ ನಡೆದಾಡಬಹುದು. ನಾಲ್ಕು ದಿನ ವಾಕ್ ಮಾಡಿದ ತಕ್ಷಣ ತೂಕ ಇಳಿಯುವುದಿಲ್ಲ ಎಂಬುದು ನೆನಪಿರಲಿ. ನಿರಂತರ ನಡಿಗೆ ಮುಂದಿನ ದಿನಗಳಲ್ಲಿ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ.
ತೂಕ ಇಳಿಸಿಕೊಳ್ಳಲು ಸ್ಕಿಪ್ಪಿಂಗ್ ಕೂಡ ಬೆಸ್ಟ್. ಕೇವಲ 10 ನಿಮಿಷ ಇದಕ್ಕೆ ಮೀಸಲಿಡಬೇಕು. ಪ್ರತಿ ದಿನ 10 ನಿಮಿಷ ಸ್ಕಿಪ್ಪಿಂಗ್ ಮಾಡ್ತಾ ಬಂದಲ್ಲಿ ನಿಮ್ಮ ತೂಕ ವೇಗವಾಗಿ ಕಡಿಮೆಯಾಗುತ್ತದೆ.
ಅನೇಕ ಮಹಿಳೆಯರಿಗೆ ಡಾನ್ಸ್ ಇಷ್ಟ. ಇದು ಕೂಡ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಆನ್ಲೈನ್ ಗಳಲ್ಲಿ ಮತ್ತು ಟಿವಿಗಳಲ್ಲಿ ಡಾನ್ಸ್ ಕ್ಲಾಸ್ ಗಳು ಲಭ್ಯವಿದೆ. ಪ್ರತಿ ದಿನ ಒಂದಿಷ್ಟು ಸಮಯ ನಿಮಗಿಷ್ಟವಾದ ಡಾನ್ಸ್ ಮಾಡಿ ಬೆವರಿಳಿಸಬಹುದು.
ಮನೆಯಲ್ಲಿ ಬೆಳಿಗ್ಗೆ ಎದ್ದ ನಂತ್ರ ಸ್ವಲ್ಪ ಸಮಯ ಯೋಗ ಮಾಡಿ. ಇದು ತೂಕ ಕಡಿಮೆ ಮಾಡುವ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.