
ಹೋಳಿ ಹಬ್ಬಕ್ಕಾಗಿ ಟಿಯಾಗೊ, ಟಿಗೊರ್ ಮತ್ತು ಹ್ಯಾರಿಯರ್ ಹಾಗೂ ಇನ್ನಿತರೆ ತಮ್ಮ ಕಾರುಗಳಿಗೆ ಭರ್ಜರಿ ರಿಯಾಯಿತಿ ಕೊಡುಗೆಗಳನ್ನು ನೀಡಿದೆ. ಈ ರಿಯಾಯಿತಿ ಕೊಡುಗೆಗಳು ನೀವು ಖರೀದಿಸಲು ಆಯ್ಕೆ ಮಾಡುವ ಕಾರುಗಳ ಮಾದರಿಯನ್ನು ಅವಲಂಬಿಸಿ ನಗದು ರಿಯಾಯಿತಿಗಳು, ವಿನಿಮಯ ಕೊಡುಗೆಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿರುತ್ತವೆ.
ಟಾಟಾ ಮೋಟಾರ್‌ನ ಮಾರ್ಚ್ 2022 ರ ರಿಯಾಯಿತಿಯ ವಿವರಗಳು
ಟಾಟಾ ತನ್ನ ಹ್ಯಾಚ್‌ಬ್ಯಾಕ್ ಟಿಯಾಗೋ ಮೇಲೆ 10,000 ರೂ.ಗಳ ಎಂವೈ 2021 ಮಾದರಿಗಳಿಗೆ ನಗದು ರಿಯಾಯಿತಿಯನ್ನು ನೀಡುತ್ತಿದೆ. ರಿಯಾಯಿತಿ ಕೊಡುಗೆಗಳು ಎಂವೈ 2022 ರಲ್ಲಿ ರೂ. 10,000 ಮತ್ತು ಎಂವೈ 2021 ಮಾಡೆಲ್‌ಗಳಲ್ಲಿ ರೂ. 15,000ದ ವಿನಿಮಯ ಕೊಡುಗೆಯನ್ನು ಸಹ ಒಳಗೊಂಡಿವೆ. ನೀವು ರೂ. 3,000 ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ರಿಯಾಯಿತಿ ಕೊಡುಗೆಗಳು ಪೆಟ್ರೋಲ್ ರೂಪಾಂತರಗಳಿಗೆ ಮಾತ್ರ ಮಾನ್ಯವಾಗಿರುತ್ತವೆ ಎಂಬುದನ್ನು ಗಮನಿಸಬೇಕು.
ಅದೇ ರೀತಿ ನಗದು ರಿಯಾಯಿತಿ ರೂ. 10,000 ಟಾಟಾ ಟಿಗೋರ್‌ನಲ್ಲಿ ಲಭ್ಯವಿದೆ. ಎಂವೈ 2021 ಮಾಡೆಲ್‌ಗಳಲ್ಲಿ 15,000 ಲಭ್ಯವಿದೆ, ಅದೇ ಮೌಲ್ಯವು ಎಂವೈ 2022 ಮಾದರಿಗಳಲ್ಲಿ 10,000. ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿಯೂ ಇದೆ. ಹಾಗೆ, ಟಿಯಾಗೊ ರಿಯಾಯಿತಿ ಕೊಡುಗೆಗಳು ಪೆಟ್ರೋಲ್ ರೂಪಾಂತರಗಳಿಗೆ ಮಾತ್ರ ಎಂಬುದು ಗಮನದಲ್ಲಿಡಬೇಕು.
ಟಾಟಾ ನೆಕ್ಸನ್‌ನ ಐಸಿಇ ಆವೃತ್ತಿಯು ಕೆಲವು ರಿಯಾಯಿತಿಗಳನ್ನು ಪಡೆಯುತ್ತದೆ. ಡೀಸೆಲ್ ಆವೃತ್ತಿಯು ರೂ. 15,000 ವಿನಿಮಯ ಬೋನಸ್ ಅನ್ನು ನೀಡಿದೆ. ಆದರೆ ಇದು ಎಂವೈ 2021 ಕಾರುಗಳಲ್ಲಿ ಮಾತ್ರ ಅನ್ವಯ. ಕಾರ್ಪೊರೇಟ್ ರಿಯಾಯಿತಿಯಲ್ಲಿ ಪೆಟ್ರೋಲ್ ರೂಪಾಂತರಗಳಿಗೆ ರೂ. 3,000 ಲಭ್ಯವಿದೆ ಮತ್ತು ಎಲ್ಲಾ ಡೀಸೆಲ್ ರೂಪಾಂತರಗಳಲ್ಲಿ 5,000 ರೂ. ಕಾರ್ಪೊರೇಟ್ ರಿಯಾಯಿತಿ ಲಭ್ಯವಿದೆ. ಹಾಗಂತ ಯಾವುದೇ ನಗದು ರಿಯಾಯಿತಿ ಲಭ್ಯವಿಲ್ಲ.
ಎಂವೈ 2021 ಟಾಟಾ ಹ್ಯಾರಿಯರ್ ಕಾರುಗಳು ಮಾತ್ರ ರೂ.20,000 ನಗದು ರಿಯಾಯಿತಿಗೆ ಅರ್ಹವಾಗಿವೆ. ಇದಲ್ಲದೇ 40,000 ರೂ. ವಿನಿಮಯ ಪ್ರೋತ್ಸಾಹ ಮತ್ತು ರೂ. 5,000 ಕಾರ್ಪೊರೇಟ್ ರಿಯಾಯಿತಿಗಳು ಲಭ್ಯವಿದೆ. ಸಫಾರಿ (ಕೇವಲ MY2021 ಮಾದರಿಗಳು) ಗಳಲ್ಲಿ 20,000 ರೂ. ಮತ್ತು 40,000 ರೂ.ಗಳ ನಗದು ರಿಯಾಯಿತಿಯನ್ನು ನೀಡುತ್ತಿದೆ.
ಆದಾಗ್ಯೂ, ಟಿಗೊರ್ ಹಾಗೂ ನೆಕ್ಸಾನ್ ನ ಎಲೆಕ್ಟ್ರಿಕ್ ಆವೃತ್ತಿಗಳಂತಹ ಮಾದರಿಗಳು ಸದ್ಯಕ್ಕೆ ಯಾವುದೇ ರಿಯಾಯಿತಿ ಕೊಡುಗೆಗಳನ್ನು ಹೊಂದಿಲ್ಲ. ಹೆಚ್ಚುವರಿಯಾಗಿ, ಪಂಚ್ ಮತ್ತು ಆಲ್ಟ್ರೋಜ್ ಅನ್ನು ರಿಯಾಯಿತಿ ಕೊಡುಗೆಗಳಿಂದ ಪ್ರತ್ಯೇಕಿಸಲಾಗಿದೆ.