
ಈ ಕುರಿತಂತೆ ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್, ಹೋಟೆಲ್ ಅಡುಗೆ, ಮಿನರಲ್ ವಾಟರ್ ಬಾಟಲ್ ಗಳು, ಹೊಸದಾಗಿ ತರಿಸಿದ ಪ್ಲೇಟುಗಳು, ಮನೆ ಮಾತ್ರ ದಲಿತರದ್ದು ಎಂದು ಹೇಳಿದೆ.
ಇದು ದಲಿತರ ಮನೆಯ ಊಟ ಎಂಬ ಕಪಟ ನಾಟಕದಲ್ಲಿ ಬಿಜೆಪಿ ಕರ್ನಾಟಕ ಮಾಡಿದ ಅಸಲಿ ಅಸ್ಪೃಶ್ಯತೆಯ ಆಚರಣೆ ಎಂದಿರುವ ಕಾಂಗ್ರೆಸ್, ದಲಿತರು ಮನುವಾದಿ ಬಿಜೆಪಿಯವರನ್ನು ಮನೆಯೊಳಗೆ ಸೇರಿಸದೆ ಸ್ವಾಭಿಮಾನ ಕಾಪಾಡಿಕೊಳ್ಳಬೇಕು. ಬಾಬಾ ಸಾಹೇಬರ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದೆ.