ಹೋಟೆಲ್ ಕೋಣೆಗಳಲ್ಲಿ ಯಾವಾಗಲೂ ಬಿಳಿಯ ಬೆಡ್‌ಶೀಟ್ ಹಾಕಿರುವುದನ್ನು ನೀವು ಗಮನಿಸಿರಬೇಕು. ಸಾಮಾನ್ಯವಾಗಿ ಪ್ರತಿ ಹೋಟೆಲ್‌ನಲ್ಲಿಯೂ ಇದೇ ರೀತಿಯ ಬಿಳಿ ಹಾಸಿಗೆ, ದಿಂಬು, ಬೆಡ್‌ಶೀಟ್‌ಗಳು ನಮ್ಮನ್ನು ಸ್ವಾಗತಿಸುತ್ತವೆ. ಕೇವಲ ಬಿಳಿ ಬೆಡ್ ಶೀಟ್ ಏಕೆ ? ಬಣ್ಣ ಬಣ್ಣದ ಬೆಡ್‌ಶೀಟ್‌ಗಳನ್ನು ಹೋಟೆಲ್‌ಗಳಲ್ಲಿ ಏಕೆ ಬಳಸುವುದಿಲ್ಲ ಎಂಬ ಪ್ರಶ್ನೆ ಸಹಜ. ಇದರ ಹಿಂದೆ ಇಂಟ್ರೆಸ್ಟಿಂಗ್ ಕಾರಣಗಳಿವೆ.
ಸ್ವಚ್ಛ ಮಾಡುವುದು ಸುಲಭ
ಬಿಳಿ ಬೆಡ್‌ಶೀಟ್ ಹೆಚ್ಚು ಕೊಳಕಾಗುತ್ತದೆ ಎಂಬುದು ನಮ್ಮೆಲ್ಲರ ಭಾವನೆ. ಆದರೆ ಹೋಟೆಲ್‌ಗಳಲ್ಲಿ ಬಿಳಿ ಶೀಟ್‌ಗಳನ್ನು ಹಾಕಲು ಪ್ರಮುಖ ಕಾರಣವೆಂದರೆ ಅದನ್ನು ಸ್ವಚ್ಛಗೊಳಿಸಲು ಸುಲಭ ಅನ್ನೋದು.
ವಾಸ್ತವವಾಗಿ ಹೋಟೆಲ್ ಕೊಠಡಿಗಳನ್ನು ಬ್ಲೀಚ್ ಮತ್ತು ಕ್ಲೋರಿನ್‌ನಿಂದ ತೊಳೆಯಲಾಗುತ್ತದೆ. ಹಾಗಾಗಿ ಬೆಡ್‌ಶೀಟ್‌ಗಳನ್ನೂ ಸುಲಭವಾಗಿ ಕ್ಲೀನ್ ಮಾಡಬಹುದು. ಆಳವಾದ ಕಲೆಗಳನ್ನು ಸಹ ಸುಲಭವಾಗಿ ತೆಗೆದುಹಾಕಲಾಗುತ್ತದೆ. ಬಣ್ಣಬಣ್ಣದ ಬೆಡ್‌ಶೀಟ್ ಆಗಿದ್ದರೆ ಅದನ್ನು ಈ ರೀತಿ ತೊಳೆಯುವುದು ಅಸಾಧ್ಯ. ಅದು ಮಸುಕಾಗಿಬಿಡುತ್ತದೆ. ಬ್ಲೀಚ್ ಮತ್ತು ಕ್ಲೋರಿನ್ ಬಳಸುವುದರಿಂದ ಬೆಡ್‌ಶೀಟ್ ವಾಸನೆ ಬರುವುದಿಲ್ಲ .
ಐಷಾರಾಮದ ಸಂಕೇತ
ಬಿಳಿ ಬಣ್ಣ ಐಷಾರಾಮಿ ಜೀವನ ಶೈಲಿಯ ಸಂಕೇತ. ಆದ್ದರಿಂದ ಹೋಟೆಲ್ ಕೊಠಡಿಗಳಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನು ಹಾಕಲಾಗುತ್ತದೆ. ಇದರಿಂದ ಕೋಣೆಗೆ ಐಷಾರಾಮಿ ಲುಕ್ ನೀಡಬಹುದು. ಬಿಳಿ ಬಣ್ಣ ಕೋಣೆ ವಿಸ್ತಾರವಾಗಿ ಕಾಣುವಂತೆ ಮಾಡುತ್ತದೆ. ಕಡಿಮೆ ವೆಚ್ಚದಲ್ಲಿ ಬೆಡ್‌ಶೀಟ್ ಖರೀದಿಸಲು ಬಿಳಿ ಬಣ್ಣವು ಅತ್ಯುತ್ತಮ ಆಯ್ಕೆಯಾಗಿದೆ.
ಶಾಂತಿಯ ಸಂಕೇತ
ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಧನಾತ್ಮಕತೆಯನ್ನು ತರುತ್ತದೆ. ಬಿಳಿ ಬೆಡ್‌ಶೀಟ್ ಮೇಲೆ ಮಲಗುವುದರಿಂದ ಮನಸ್ಸು ಶಾಂತವಾಗಿ ನಿದ್ರಿಸುತ್ತದೆ. ಮನಸ್ಸು ಪ್ರಶಾಂತವಾಗಿರುವುದರ ಜೊತೆಗೆ ಹೃದಯವನ್ನು ಸಂತೋಷವಾಗಿಡಲು ಬಿಳಿ ಬಣ್ಣ ಸಹಕಾರಿ.
ಹೋಟೆಲ್ ಕೋಣೆಗಳಲ್ಲಿ ಹಾಸಿಗೆಗಳ ಮೇಲೆ ಬಿಳಿ ಬೆಡ್‌ಶೀಟ್ ಹಾಕುವ ಪ್ರವೃತ್ತಿ ಆರಂಭವಾಗಿದ್ದು 90ರ ದಶಕದ ನಂತರ. ಮೊದಲು ಹೋಟೆಲ್ ಕೋಣೆಗಳ ಬೆಡ್‌ಶೀಟ್‌ಗಳ ಅವ್ಯವಸ್ಥೆಯನ್ನು ಮರೆಮಾಡಲು ಬಣ್ಣಬಣ್ಣದ ಬೆಡ್‌ಶೀಟ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ 90ರ ದಶಕದಲ್ಲಿ ಪಾಶ್ಚಿಮಾತ್ಯ ಹೋಟೆಲ್ ವಿನ್ಯಾಸಕರು ಕೋಣೆಗೆ ಐಷಾರಾಮಿ ನೋಟವನ್ನು ನೀಡಲು ಬಿಳಿ ಬೆಡ್‌ಶೀಟ್ ಹಾಕಲು ಪ್ರಾರಂಭಿಸಿದರು.