
ಮೇ 5 ರಂದು ಕುಟುಂಬವೊಂದು ಹೋಟೆಲ್‌ನಿಂದ ಆಹಾರವನ್ನು ಆರ್ಡರ್ ಮಾಡಿದಾಗ ಈ ಘಟನೆ ಸಂಭವಿಸಿದೆ. ಆಹಾರದ ಪೊಟ್ಟಣವನ್ನು ಬಿಚ್ಚಿದಾಗ, ಪೊಟ್ಟಣದಲ್ಲಿ ಹಾವಿನ ಚರ್ಮದ ತುಂಡು ಕಂಡುಬಂದಿದೆ. ಕೂಡಲೇ ಗ್ರಾಹಕರು ದೂರು ದಾಖಲಿಸಿದ್ದಾರೆ. ದಾಖಲಾದ ದೂರಿನ ಆಧಾರದ ಮೇಲೆ, ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇದೀಗ ಹೋಟೆಲ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸಂಪೂರ್ಣ ಸ್ವಚ್ಛತೆಯ ನಂತರವೇ ಹೋಟೆಲ್ ತೆರೆಯಲು ಮಾಲೀಕರಿಗೆ ಸೂಚಿಸಲಾಗಿದೆ.
ಪೂವತ್ತೂರಿನ ನಿವಾಸಿಯೊಬ್ಬರು ಆರ್ಡರ್ ಮಾಡಿದ್ದ ಪರೋಟಾದಲ್ಲಿ ಹಾವಿನ ಚರ್ಮ ಪತ್ತೆಯಾಗಿದೆ. ಆಹಾರ ಕಟ್ಟಲು ಬಳಸುತ್ತಿದ್ದ ಪೇಪರ್ ನಲ್ಲಿ ಚರ್ಮ ಪತ್ತೆಯಾಗಿದೆ. ವಿಷಯ ಬೆಳಕಿಗೆ ಬಂದ ನಂತರ ಹೆಚ್ಚಿನ ಪರೀಕ್ಷೆಗಾಗಿ ಆಹಾರ ಸುರಕ್ಷತಾ ಇಲಾಖೆ ಪೊಟ್ಟಣ ಮತ್ತು ಆಹಾರವನ್ನು ಜಪ್ತಿ ಮಾಡಿದೆ.
ಪುರಸಭೆಯು ಆರಂಭಿಸಿದ ತನಿಖೆಯಲ್ಲಿ ಹೋಟೆಲ್ ಅಗತ್ಯ ಪರವಾನಗಿಗಳನ್ನು ಹೊಂದಿತ್ತು ಎಂದು ಕಂಡುಬಂದಿದೆ. ಜೊತೆಗೆ, ಹೋಟೆಲ್ ಆವರಣದಲ್ಲಿ ದಾಸ್ತಾನು ಮಾಡಿದ ಆಹಾರದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎನ್ನಲಾಗಿದೆ.