ಯಾವುದೇ ಉದ್ಯಮವನ್ನ ಮಾಡ್ತಿರಲಿ ದೇವರ ಫೋಟೋ ಇಲ್ಲವೇ ಮೂರ್ತಿಯನ್ನ ಅಲ್ಲಿಟ್ಟಿಲ್ಲ ಅಂದರೆ ಅದಕ್ಕೊಂದು ಶೋಭೆ ಇರಲ್ಲ. ಅದರಲ್ಲೂ ವಿಶೇಷವಾಗಿ ಹೋಟೆಲ್ಗಳಲ್ಲಂತೂ ನೀವು ದೇವರ ಮೂರ್ತಿಗಳನ್ನ ಕೂರಿಸುವ ಮೊದಲು ಕೆಲವೊಂದು ಮುಖ್ಯ ಅಂಶಗಳನ್ನ ನೆನಪಲ್ಲಿ ಇಡಬೇಕು ಅನ್ನುತ್ತೆ ವಾಸ್ತು ಶಾಸ್ತ್ರ.
ವಾಸ್ತು ಶಾಸ್ತ್ರದ ಪ್ರಕಾರ ದೇವರ ಮೂರ್ತಿಯನ್ನ ಉತ್ತ ದಿಕ್ಕಿನಲ್ಲೇ ಇಡಬೇಕು. ಉತ್ತರ ದಿಕ್ಕು ದೇವರ ದಿಕ್ಕು ಎಂದು ಹೇಳಲಾಗುತ್ತೆ. ಹೀಗಾಗಿ ಈ ದಿಕ್ಕಿನಲ್ಲಿ ನೀವು ದೇವರನ್ನ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚಲಿದೆ. ಹಾಗೂ ಹೆಚ್ಚು ಇಕ್ಕಟ್ಟಾಗಿರುವ ಜಾಗದಲ್ಲಿ ದೇವರ ಮೂರ್ತಿ ಇಲ್ಲವೇ ಫೋಟೋಗಳನ್ನ ಇಡದಂತೆ ನೋಡಿಕೊಳ್ಳಿ . ಮನೆಗಳಲ್ಲೂ ದೇವರ ಕೋಣೆಯನ್ನ ಉತ್ತರ ದಿಕ್ಕಿಗೆ ಮುಖ ಮಾಡಿ ನಿರ್ಮಿಸಿದರೆ ಮನೆಗೆ ಒಳ್ಳೆಯದು.