2022ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಮೋಟಾರ್ ಸೈಕಲ್ ಹೀರೋ ಸ್ಪ್ಲೆಂಡರ್. ಡಿಸೆಂಬರ್‌ನಲ್ಲಿ ಒಟ್ಟು 2,25,443 ಯುನಿಟ್‌ಗಳು ಮಾರಾಟವಾಗಿವೆ. ಆದರೆ 2021 ರ ಡಿಸೆಂಬರ್‌ನಲ್ಲಿ ಇದಕ್ಕಿಂತಲೂ 1,316 ಯುನಿಟ್‌ಗಳು ಹೆಚ್ಚಾಗಿ ಸೇಲ್ ಆಗಿದ್ದವು.
ಹಾಗಾಗಿ ವಾರ್ಷಿಕ ಆಧಾರದ ಮೇಲೆ ಹೀರೋ ಸ್ಪ್ಲೆಂಡರ್ ಮಾರಾಟದಲ್ಲಿ 0.58 ರಷ್ಟು ಸ್ವಲ್ಪ ಇಳಿಕೆಯಾಗಿದೆ. ಆದರೂ ಅತಿ ಹೆಚ್ಚು ಬಿಕರಿಯಾದ ಮೋಟಾರ್ ಸೈಕಲ್ ಎಂಬ ಹೆಗ್ಗಳಿಕೆಗೆ ಹೀರೋ ಸ್ಪ್ಲೆಂಡರ್ ಪಾತ್ರವಾಗಿದೆ.
ಡಿಸೆಂಬರ್ 2021 ರಲ್ಲಿ ಹೀರೋ ಸ್ಪ್ಲೆಂಡರ್‌ನ ಒಟ್ಟು 2,26,759 ಯುನಿಟ್‌ಗಳು ಮಾರಾಟವಾಗಿವೆ. ಇದನ್ನು ಬಿಟ್ಟರೆ ಅತಿ ಹೆಚ್ಚು ಸೇಲ್ ಆದ ಮೋಟಾರ್ ಸೈಕಲ್ ಅಂದರೆ ಹೀರೋ HF ಡಿಲಕ್ಸ್. ಮೂರನೇ ಸ್ಥಾನದಲ್ಲಿ ಹೋಂಡಾ ಸಿಬಿ ಶೈನ್ಇದೆ. ಮೊದಲೆರಡು ಸ್ಥಾನಗಳನ್ನು ಹೀರೋ ಕಬಳಿಸಿದೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್‌ಗಳ ಪೈಕಿ ಹೋಂಡಾ CB ಶೈನ್ ಮೂರನೇ ಸ್ಥಾನದಲ್ಲಿದೆ. ಹೋಂಡಾ ಸಿಬಿ ಶೈನ್ನ ಕೇವಲ 87,760 ಯುನಿಟ್‌ಗಳು ಮಾರಾಟವಾಗಿವೆ. ಆದಾಗ್ಯೂ ವಾರ್ಷಿಕ ಮಾರಾಟದಲ್ಲಿ ಶೇ.28.94ರಷ್ಟು ಹೆಚ್ಚಳವಾಗಿದೆ.
ಡಿಸೆಂಬರ್ 2021 ಕ್ಕೆ ಹೋಲಿಸಿದರೆ, 19,699 ಯುನಿಟ್‌ಗಳು ಹೆಚ್ಚು ಮಾರಾಟವಾಗಿವೆ. ಸಿಬಿ ಶೈನ್‌ಗೆ ಹೋಲಿಸಿದರೆ ಹೀರೋ ಸ್ಪ್ಲೆಂಡರ್‌ನ 1.25 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ಈ ಕಾರಣದಿಂದಾಗಿ ಇವೆರಡರ ಜನಪ್ರಿಯತೆಯಲ್ಲಿ ಸ್ಪಷ್ಟ ವ್ಯತ್ಯಾಸವನ್ನು ಕಾಣಬಹುದು. ಹೀರೋ ಸ್ಪ್ಲೆಂಡರ್ ಬೆಲೆ 72,076 ರಿಂದ 74,396 ರೂಪಾಯಿವರೆಗೂ ಇದೆ.