ವೈರಲ್ ಆಗಿರುವ ಕಚಾ ಬದಮ್ ಹಾಡನ್ನು ಹಾಡಿರೋ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೊಸ ಹಾಡಿನೊಂದಿಗೆ ಆನ್ಲೈನ್ಗೆ ಎಂಟ್ರಿ ಕೊಟ್ಟಿದ್ದಾರೆ.
ಕಚಾ ಬಾದಾಮ್ ಗಾಯಕ ಭುವನ್ ಬಡ್ಯಾಕರ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸ್ಥಳೀಯ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ತಮ್ಮ ಹೊಸ ಕಾರನ್ನು ಕಲಿಯಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ, ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ತಮ್ಮ ಹೊಸ ಹಾಡು ಅಮರ್ ನೋಟುನ್ ಗರಿ (ಬಂಗಾಳಿ ಭಾಷೆಯಲ್ಲಿ ನನ್ನ ಹೊಸ ಕಾರು) ಗಾಗಿ ವೈರಲ್ ಆಗಿದ್ದಾರೆ.
ಹೊಸ ಹಾಡಿನ ಸಾಹಿತ್ಯದಲ್ಲಿ ತಾವು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದು ಹೇಗೆ ಮತ್ತು ಡ್ರೈವಿಂಗ್ ಕಲಿಯುವಾಗ ದುರದೃಷ್ಟವಶಾತ್ ಗೋಡೆಗೆ ಹೇಗೆ ಡಿಕ್ಕಿ ಹೊಡೆದ್ರು. ಹಾಗೂ ಅಪಘಾತದ ಸಮಯದಲ್ಲಿ ದೇವರು ಆತನನ್ನು ಹೇಗೆ ರಕ್ಷಿಸಿದ ಎಂಬುದರ ಕುರಿತಾಗಿ ಗೀತೆಯ ಸಾಹಿತ್ಯ ರಚಿಸಿ ಹಾಡಿದ್ದಾರೆ. ಸದ್ಯ, ಈ ಹಾಡು ಇಂಟರ್ನೆಟ್ ನಲ್ಲಿ ರೌಂಡ್ ಹೊಡೆಯುತ್ತಿದೆ.