alex Certify ಹೊಸ ಸಂಬಂಧದಲ್ಲಿ ಅಪ್ಪಿತಪ್ಪಿಯೂ ಈ 5 ವಿಚಾರಗಳನ್ನು ನಿಮ್ಮ ಗೆಳತಿಗೆ ಹೇಳಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸಂಬಂಧದಲ್ಲಿ ಅಪ್ಪಿತಪ್ಪಿಯೂ ಈ 5 ವಿಚಾರಗಳನ್ನು ನಿಮ್ಮ ಗೆಳತಿಗೆ ಹೇಳಬೇಡಿ

ಪ್ರೀತಿ ಇಲ್ಲದೇ ಇದ್ದರೆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ರೆ ಪರಸ್ಪರರ ಪ್ರೀತಿ ವಿಶ್ವಾಸ ಗಳಿಸಲು ಸಮಯ ಬೇಕು. ನಂಬಿಕೆ ಮತ್ತು ಪ್ರೀತಿ ಇಬ್ಬರಲ್ಲೂ ಇರಬೇಕು. ಪ್ರೇಮ ಸಂಬಂಧದ ಆರಂಭಿಕ ದಿನಗಳು ಯಾವಾಗಲೂ ಸೂಕ್ಷ್ಮವಾಗಿರುತ್ತವೆ. ಹಾಗಾಗಿ ಆ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಕುಟುಂಬದ ರಹಸ್ಯ ಬಿಚ್ಚಿಡಬೇಡಿ : ಪ್ರತಿಯೊಬ್ಬರಿಗೂ ಅವರವರ ಕುಟುಂಬವೇ ಮುಖ್ಯ. ನಿಮ್ಮ ಜೀವನದಲ್ಲಿ ಗೆಳತಿ ಬಂದ ತಕ್ಷಣ ನಿಮ್ಮ ಮನೆಗೆ ಸಂಬಂಧಪಟ್ಟ ರಹಸ್ಯಗಳನ್ನೆಲ್ಲ ಆಕೆಯೊಂದಿಗೆ ಹಂಚಿಕೊಳ್ಳಬೇಡಿ. ಆಕೆಯ ಮೇಲೆ ನಿಮಗೆ ಸಂಪೂರ್ಣ ನಂಬಿಕೆ ಹುಟ್ಟುವವರೆಗೂ ಖಾಸಗಿ ವಿಷಯಗಳನ್ನು ಹಂಚಿಕೊಳ್ಳದೇ ಇರುವುದು ಒಳಿತು. ಯಾಕೆಂದರೆ ಆಕೆ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು.

ಅವಮಾನದ ಬಗ್ಗೆ ಹೇಳಬೇಡಿ: ನಿಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಯಾರೋ ನಿಮ್ಮನ್ನು ಅವಮಾನಿಸಿದ್ದರೆ ಅದನ್ನು ಹೇಳಿಕೊಳ್ಳಬೇಡಿ. ಸಂಬಂಧದ ಆರಂಭಿಕ ದಿನಗಳಲ್ಲಿ ಈ ವಿಷಯಗಳನ್ನು ನಿಮ್ಮ ಗೆಳತಿಗೆ ಹೇಳಬಾರದು. ಬಹುಶಃ ಇದೆಲ್ಲ ತಿಳಿದ ನಂತರ ಆಕೆ ನಿಮ್ಮ ಬಗ್ಗೆ ತಮಾಷೆ ಮಾಡಲು ಪ್ರಾರಂಭಿಸುತ್ತಾಳೆ. ಅದು ನಿಮಗೆ ಬೇಸರ ತರಬಹುದು.

ದೌರ್ಬಲ್ಯಗಳನ್ನು ಬಹಿರಂಗಪಡಿಸಬೇಡಿ : ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯ ಮತ್ತು ಕೆಲವು ಶಕ್ತಿಗಳನ್ನು ಸಹ ಹೊಂದಿರುತ್ತಾನೆ. ಆದರೆ ನಿಮ್ಮ ಹೊಸ ಗೆಳತಿಯ ಎದುರು ಅದನ್ನು ಬಹಿರಂಗಪಡಿಸಲು ಆತುರಪಡಬೇಡಿ. ನೀವು ಆಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ನಂತರವೇ ನಿಮ್ಮ ದೌರ್ಬಲ್ಯದ ಬಗ್ಗೆ ಮಾತನಾಡಿ.

ಹೃದಯದ ಮಾತು : ನಾವು ಯಾರನ್ನಾದರೂ ಪ್ರೀತಿಸಿದಾಗ, ನಮ್ಮ ಹೃದಯದಲ್ಲಿರುವ ಎಲ್ಲವನ್ನೂ ಹೇಳಲು ಬಯಸುತ್ತೇವೆ. ಆದ್ರೆ ಹೊಸ ಸಂಬಂಧದಲ್ಲಿ ತಕ್ಷಣಕ್ಕೆ ಎಲ್ಲವನ್ನೂ ಹೇಳಿಬಿಡುವುದು ಸೂಕ್ತವಲ್ಲ. ಸ್ವಲ್ಪ ಸಮಯದ ನಂತರ ನಿಮ್ಮ ಹೃದಯದ ರಹಸ್ಯಗಳನ್ನು ಗೆಳತಿಯರೊಂದಿಗೆ ಹಂಚಿಕೊಳ್ಳಿ.

ನಿಮ್ಮ ಸಂಪೂರ್ಣ ಆದಾಯವನ್ನು ಬಹಿರಂಗಪಡಿಸಬೇಡಿ : ನೀವು ಪ್ರೀತಿಸುತ್ತಿರುವ ಯುವತಿಯ ಬಳಿ ನಿಮ್ಮ ಸಂಬಳದ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಡಬೇಡಿ. ಆಕೆ ನಿಮ್ಮ ಹಣದ ಹಿಂದೆ ಬಿದ್ದಿರಲೂಬಹುದು. ಸಂಬಂಧಕ್ಕೆ ಸ್ವಲ್ಪ ಸಮಯ ನೀಡಿ, ನಂತರ ನಿಮ್ಮ ಎಲ್ಲಾ ರಹಸ್ಯಗಳನ್ನು ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...