ಪ್ರತಿಯೊಬ್ಬರ ಮನೆಯಲ್ಲೂ ಒಂದಾದ್ರೂ ವಾಹನ ಇದ್ದೇ ಇರುತ್ತೆ. ಬೈಕ್, ಕಾರು ಹೀಗೆ ಮನೆಯ ಮುಂದೆ ವಾಹನಗಳ ಸಾಲು ಕಾಣುತ್ತೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ವಾಹನ ಮಾರುಕಟ್ಟೆಗೆ ಬರ್ತಿದ್ದಂತೆ ಜನರು ತಮ್ಮ ಆಯ್ಕೆ ಬದಲಿಸ್ತಾರೆ.
ಮನೆಗೆ ಹೊಸ ವಾಹನ ಬರ್ತಿದ್ದಂತೆ ಮನೆಯಲ್ಲಿ ಖುಷಿ ತುಂಬಿರುತ್ತದೆ. ಹೊಸ ವಾಹನದಲ್ಲಿ ಕುಳಿತು ಸವಾರಿ ಮಾಡಲು ಎಲ್ಲರೂ ಬಯಸ್ತಾರೆ. ಹೊಸ ವಾಹನ ಅನೇಕ ಬಾರಿ ಬಿಕ್ಕಟ್ಟು, ನಷ್ಟಕ್ಕೆ ಕಾರಣವಾಗುತ್ತದೆ. ಯಾವುದೇ ಅಪಘಾತವಾಗಬಾರದು, ಯಶಸ್ಸು ಪ್ರಾಪ್ತಿಯಾಗ್ಬೇಕು ಎನ್ನುವವರು ವಾಹನ ಖರೀದಿ ಮಾಡಿದ ನಂತ್ರ ಕೆಲವೊಂದು ಮುಖ್ಯ ಕೆಲಸಗಳನ್ನು ಮಾಡಬೇಕು.
ಮನೆಗೆ ವಾಹನ ತರುವ ಮೊದಲು ಶುಭ ಮುಹೂರ್ತವನ್ನು ನೋಡಬೇಕು. ಯಾವುದೇ ಕಾರಣಕ್ಕೂ ಶನಿವಾರ ವಾಹನ ಖರೀದಿ ಮಾಡಬಾರದು. ನಕ್ಷತ್ರ, ಶುಭ ಫಲಗಳನ್ನು ನೋಡಿ ಖರೀದಿ ಮಾಡಬೇಕು.
ಮನೆಗೆ ವಾಹನ ಬಂದ ಮೇಲೆ ಪೂಜೆ ಮಾಡಿ. ಹೂವಿನ ಮಾಲೆಯನ್ನು ಹಾಕಿ. ಸ್ವಸ್ತಿಕವನ್ನು ಬಿಡಿಸಿ. ವಾಹನದ ಎದುರು ತೆಂಗಿನಕಾಯಿ ಒಡೆಯಿರಿ. ನಂತ್ರ ಆರತಿ ಮಾಡಿ. ಭಗವಂತನ ಹೆಸರು ಹೇಳಿ ವಾಹನ ಚಲಾಯಿಸಿ. ವಾಹನದಲ್ಲಿ ದೇವರ ಮೂರ್ತಿಯನ್ನು ಇಡಿ. ಅಪಘಾತ ತಡೆಯಲು ಇದು ನೆರವಾಗುತ್ತದೆ.
ಶೋರೂಂನಿಂದ ವಾಹನ ತರುವ ಮೊದಲು ಟೈರ್ ಅಡಿ ಲಿಂಬೆ ಹಣ್ಣನ್ನು ಇಟ್ಟು ಗಾಡಿ ಚಲಾಯಿಸಿ.