alex Certify ಹೊಸ ವರ್ಷ ಆಚರಣೆಗೆ ಇಲ್ಲಿದೆ ಅವಕಾಶ, ಅತ್ಯುತ್ತಮ ಪ್ರವಾಸಿ ಸ್ಥಳ ವೀಕ್ಷಣೆಗೆ ರೈಲ್ವೆ ಇಲಾಖೆಯಿಂದ ವಿಶೇಷ ಪ್ಯಾಕೇಜ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷ ಆಚರಣೆಗೆ ಇಲ್ಲಿದೆ ಅವಕಾಶ, ಅತ್ಯುತ್ತಮ ಪ್ರವಾಸಿ ಸ್ಥಳ ವೀಕ್ಷಣೆಗೆ ರೈಲ್ವೆ ಇಲಾಖೆಯಿಂದ ವಿಶೇಷ ಪ್ಯಾಕೇಜ್‌….!

ಹೊಸ ವರ್ಷದಂದು ಇಡೀ ಜಗತ್ತೇ ಸಂಭ್ರಮಿಸುತ್ತದೆ. ಡಿಸೆಂಬರ್‌ ಅಂತ್ಯದಲ್ಲಿ ಬಹುತೇಕ ಕಚೇರಿಗಳಿಗೆ ರಜಾ ಸಹ ನೀಡಲಾಗುತ್ತದೆ. ಕ್ರಿಸ್ಮಸ್‌ ಜೊತೆಗೆ ನ್ಯೂ ಇಯರ್‌ ಆಚರಣೆಗಾಗಿ ಜನರು ಹೊಸ ಸ್ಥಳಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ನೀವು ಕೂಡ ಹೊಸ ವರ್ಷಕ್ಕೆ ಪ್ರವಾಸ ಹೊರಡುವ ತಯಾರಿಯಲ್ಲಿದ್ರೆ ಭಾರತೀಯ ರೈಲ್ವೆ ಇಲಾಖೆ ವಿಶೇಷ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಿಸಿದೆ.

IRCTCಯ ಈ ಪ್ರವಾಸ ಪ್ಯಾಕೇಜ್ ಮೂಲಕ ನೀವು ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ನಲ್ಲಿ ಪ್ರಯಾಣಿಸಬಹುದು, ದೇಶದ ಅತ್ಯುತ್ತಮ ಸ್ಥಳಗಳಿಗೆ ಹೋಗಿ ಹೊಸ ವರ್ಷವನ್ನು ಆಚರಿಸಬಹುದು. ಈ ಪ್ರವಾಸವು ಎಷ್ಟು ದಿನಗಳವರೆಗೆ ಇರುತ್ತದೆ?  ಎಷ್ಟು ವೆಚ್ಚವಾಗುತ್ತದೆ? ಯಾವ್ಯಾವ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬುದನ್ನೆಲ್ಲ ನೋಡೋಣ.

ಪ್ರವಾಸ ಪ್ಯಾಕೇಜ್ ಹೀಗಿದೆ…..

ಈ ಪ್ರವಾಸ 9 ಹಗಲು ಮತ್ತು 10 ರಾತ್ರಿಗಳದ್ದಾಗಿದೆ. ದೇಶದ ಅತ್ಯುತ್ತಮ ಪ್ರವಾಸಿ ಸ್ಥಳಗಳಿಗೆ ನಿಮ್ಮನ್ನು ಕೊಂಡೊಯ್ಯಲಾಗುತ್ತದೆ. ತಂಗುವಿಕೆ, ಆಹಾರ ಮತ್ತು ಪ್ರಯಾಣದ ಸಂಪೂರ್ಣ ವೆಚ್ಚವನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗುತ್ತದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಿಂದ ಹಿಡಿದು ಬಸ್ ಪ್ರಯಾಣ ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯದವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. IRCTC ಯ ಈ ವಿಶೇಷ ಪ್ರವಾಸದ ಪ್ಯಾಕೇಜ್ ಮೂಲಕ, ನೀವು ದೇಶದ ಜನಪ್ರಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಇದು ಕೆಲವು ಧಾರ್ಮಿಕ ಮತ್ತು ಕೆಲವು ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿದೆ. ಪ್ಯಾಕೇಜ್ನಲ್ಲಿ ಹೊಸ ವರ್ಷವನ್ನು ಆಚರಿಸಲು ಉತ್ತಮ ಸ್ಥಳಗಳಿವೆ.

ನೀವು ಎಲ್ಲಿಗೆ ಭೇಟಿ ನೀಡಬಹುದು?

ಈ ಪ್ಯಾಕೇಜ್ ಮೂಲಕ ನೀವು ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.

– ಗೋವಾದಲ್ಲಿ ನೀವು ದಕ್ಷಿಣ ಮತ್ತು ಉತ್ತರ ಗೋವಾದ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಕಲಂಗೋಟ್‌ ಬೀಚ್, ಬಾಗಾ ಬೀಚ್, ಓಲ್ಡ್ ಗೋವಾ ಚರ್ಚ್, ಮಂಗೇಶಿ ದೇವಸ್ಥಾನ, ಮಿರಾಮರ್ ಬೀಚ್, ಕೊಲ್ವಾ ಬೀಚ್ ಮತ್ತು ಅಗುಡಾ ಫೋರ್ಟ್ ಮುಂತಾದ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ.

– ಮಹಾರಾಷ್ಟ್ರದ ನಾಸಿಕ್, ತ್ರಯಂಬಕೇಶ್ವರ ದೇವಸ್ಥಾನ ಮತ್ತು ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಬಹುದು.

– ಮಧ್ಯಪ್ರದೇಶದಲ್ಲಿ ನೀವು ಎರಡು ಜ್ಯೋತಿರ್ಲಿಂಗಗಳನ್ನು ನೋಡಬಹುದು. ಇಲ್ಲಿ ನೀವು ಮಹಾಕಾಲ್ ಮತ್ತು ಓಂಕಾರೇಶ್ವರದ ಹೊಸ ಕಾರಿಡಾರ್ ಅನ್ನು ವೀಕ್ಷಣೆ ಮಾಡಬಹುದು.

– ಗುಜರಾತ್‌ನಲ್ಲಿ ಏಕತೆಯ ಪ್ರತಿಮೆ ವೀಕ್ಷಣೆಯ ಜೊತೆಗೆ ಅನೇಕ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ.

ಎಷ್ಟು ವೆಚ್ಚವಾಗುತ್ತದೆ? ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ 66,415 ರೂಪಾಯಿ ವೆಚ್ಚವಾಗುತ್ತದೆ. ಇಬ್ಬರು ಅಥವಾ ಮೂವರು ಒಟ್ಟಿಗೆ ಹೋದರೆ ಉತ್ತಮ. ಈ ರೀತಿ ಇದ್ದಾಗ ಒಬ್ಬರಿಗೆ 57,750 ರೂಪಾಯಿ ವೆಚ್ಚವಾಗುತ್ತದೆ. ಈ ಪ್ರವಾಸದಲ್ಲಿ ನೀವು ಹೆಚ್ಚು ಆರಾಮದಾಯಕವಾಗಿ ಪ್ರಯಾಣಿಸಲು ಬಯಸಿದರೆ, ನಂತರ ಉನ್ನತ ದರ್ಜೆಯ ಟಿಕೆಟ್ ಅನ್ನು ಬುಕ್ ಮಾಡುವ ಸೌಲಭ್ಯವೂ ಇದೆ. ಅವುಗಳಿಗೆ 79,695 ರೂಪಾಯಿ ಖರ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...