ಬೆಂಗಳೂರು: ಕೊರೊನಾ ಹಾಗೂ ಹೊಸ ರೂಪಾಂತರಿಯ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಈ ನಡುವೆಯೂ ದಾಖಲೆಯ ಮದ್ಯ ಮಾರಾಟವಾಗಿದೆ.
ಡಿ. 28ರಂದು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಅದರಲ್ಲಿಯೂ ಹೊಸ ವರ್ಷಾಚರಣೆ ಸಂದರ್ಭದಲ್ಲಿಯಂತೂ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಇದರ ಮಧ್ಯೆಯೂ ಕಳೆದ ಬಾರಿಯ ದಾಖಲೆಯ ಮುರಿದು, ಮದ್ಯ ಮಾರಾಟವಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿನ ವರ್ಷದ ಕೊನೆಯ ವಾರವನ್ನು ಹೊಲಿಕೆ ಮಾಡಿದರೆ 2021ರ ಕೊನೆಯ ವಾರದಲ್ಲಿ ಶೇ. 13ರಷ್ಟು ಮದ್ಯಮಾರಾಟವಾಗಿದೆ. ರಾಜ್ಯದಲ್ಲಿ ಡಿ. 31ರಂದು ಒಂದೇ ದಿನ 145 ಕೋಟಿ ರೂಪಾಯಿಂದ 165 ಕೋಟಿ ರೂ. ವರೆಗೆ ಮದ್ಯ ಮಾರಾಟವಾಗಿದೆ. ಡಿ. 24ರಿಂದ 31ರ ವರೆಗೆ ಬರೋಬ್ಬರಿ 974.58 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಎಂದು ತಿಳಿದು ಬಂದಿದೆ.
ಈ ವರ್ಷ ಡಿ. 31ರಲ್ಲಿ ರಾಜ್ಯದಲ್ಲಿ 17.14 ಲಕ್ಷ ಕೇಸ್ ದೇಶೀಯ ಮದ್ಯ, 1.55 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ಅಲ್ಲದೇ, ಈ ವರ್ಷ 2.39 ಲಕ್ಷ ಕಾರ್ಟನ್ ಬಾಕ್ಸ್ ಗಳಲ್ಲಿ ದೇಶೀಯ ಮದ್ಯ ಮಾರಾಟವಾಗಿದ್ದರೆ, ಕಳೆದ ವರ್ಷ 2.25 ಲಕ್ಷ ಬಾಕ್ಸ್ ಗಳಷ್ಟು ಮಾರಾಟವಾಗಿತ್ತು.
ಕಳೆದ ಮೂರು ವರ್ಷಗಳ ಮದ್ಯ ಮಾರಾಟವನ್ನು ಗಮನಿಸಿದಾಗ 2019ರಲ್ಲಿ ರಾಜ್ಯದಲ್ಲಿ 163.61 ಕೋಟಿ ರೂ., 2020ರಲ್ಲಿ 153.53 ಕೋಟಿ ರೂ. ಮದ್ಯದ ವಹಿವಾಟು ನಡೆದಿತ್ತು.
ದಿನದ ಅಂತ್ಯದ ವೇಳೆಗೆ 165 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ. 2019ರ ಡಿಸೆಂಬರ್ 31ರಂದು 3.62 ಲಕ್ಷ ಮದ್ಯ ಬಾಕ್ಸ್ ಮಾರಾಟವಾಗಿದೆ. ಆದರೆ, 2020ರಲ್ಲಿ ಕಡಿಮೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.