ಹೊಸವರ್ಷಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿಯಿದೆ. ಆದ್ರೆ ಹೊಸ ವರ್ಷಾಚರಣೆಗೆ ನಾನಾ ಪ್ಲಾನ್ ಹಾಕಿದ್ದ ಬೆಂಗಳೂರಿಗರಿಗೆ ಸೆಲೆಬ್ರೇಷನ್ ಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ.
ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿರೋದ್ರಿಂದ ಸರ್ಕಾರ ಆಚರಣೆಗೆ ಕಠಿಣ ರೂಲ್ಸ್ ತಂದಿದೆ. ಜೊತೆಗೆ ಮಾರ್ಗಸೂಚಿ ಕೂಡ ಜಾರಿ ಮಾಡಿದೆ. ಈ ಕುರಿತು ಸಿಎಂ ಹಾಗೂ ಗೃಹ ಸಚಿವರೊಂದಿಗೆ ಇದೇ ವಾರ ಪೊಲೀಸ್ ಇಲಾಖೆ ಸಭೆ ನಡೆಸಲಿದೆ.
ಸಭೆಯಲ್ಲಿ, ಎಲ್ಲಾ ನಿಯಮಗಳ ಜೊತೆ ವರ್ಷದ ಕೊನೆ ದಿನದಂದು ಪಬ್, ರೆಸ್ಟೋರೆಂಟ್ ಗಳನ್ನ ರಾತ್ರಿ ಹನ್ನೊಂದು ಗಂಟೆಗೆ ಮುಚ್ಚಿಸುವ ಬಗ್ಗೆ ಚರ್ಚೆ ನಡೆಯಲಿದೆ.
ರ್ಯಾಪರ್ ಕನ್ಸರ್ಟ್ ನಲ್ಲಿ ತೆಂಡೂಲ್ಕರ್ ಪುತ್ರಿ, ವೈರಲ್ ಆಗ್ತಿದೆ ಸಾರಾ ವಿಡಿಯೋ..!
ಈಗಾಗ್ಲೇ ಪೊಲೀಸರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಭದ್ರತೆ ಹಾಗೂ ವೈರಸ್ ತಡೆಗಟ್ಟುವ ದೃಷ್ಟಿಯಿಂದ ಪಬ್ ಹಾಗೂ ರೆಸ್ಟೋರೆಂಟ್ ಗಳನ್ನ ಬೇಗ ಕ್ಲೋಸ್ ಮಾಡುವ ಪ್ಲಾನ್ ಮಾಡಲಾಗಿದೆ.
ಅಷ್ಟೇ ಅಲ್ಲಾ ಆ ದಿನ ರಾತ್ರಿ ಹನ್ನೊಂದು ಗಂಟೆ ಮೇಲೆ ರಸ್ತೆಗೆ ಇಳಿದರೆ ಪೊಲೀಸರನ್ನ ಎದುರಿಸುವ ಪರಿಸ್ಥಿತಿ ಉಂಟಾಗಬಹುದು. ಈಗಾಗ್ಲೇ ಮಾರ್ಗಸೂಚಿ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಿಲ್ಲ.
ಇಂಥಾ ಸಂದರ್ಭದಲ್ಲಿ ಜನರನ್ನ ನಿಯಂತ್ರಿಸಬೇಕೆಂದರೆ ಅಂದು ಜನರು ರಾತ್ರಿ ಹನ್ನೊಂದು ಗಂಟೆಗೆ ಮನೆ ಸೇರುವುದು ಉತ್ತಮ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಎಂ ಹಾಗೂ ಗೃಹಸಚಿವರೊಂದಿಗೆ ಸಭೆ ನಡೆದ ನಂತರ ಈ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.