ಹೊಸ ವರ್ಷದ ಆರಂಭದಲ್ಲೇ ಚಿನ್ನ ಮತ್ತು ಬೆಳ್ಳಿ ದರ ನಿರಂತರ ಏರಿಕೆ ಕಾಣುತ್ತಿದೆ. ಮಂಗಳವಾರ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಬೆಳ್ಳಿ ದರ 70,000 ರೂಪಾಯಿಯ ಸಮೀಪದಲ್ಲಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ 62,000 ರೂಪಾಯಿಗೆ ಮತ್ತು ಬೆಳ್ಳಿ ಕೆಜಿಗೆ 80,000 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಬೆದರಿಕೆಯಿಂದಾಗಿ ಬಂಗಾರವು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.
ಹಾಗಾಗಿಯೇ ಬೆಲೆ ಏರಿಕೆಯಾಗುತ್ತಿದ್ದು, ಸದ್ಯದಲ್ಲೇ 10 ಗ್ರಾಂ ಚಿನ್ನದ ದರ 62,000 ರೂಪಾಯಿಗೆ ತಲುಪುವ ನಿರೀಕ್ಷೆಯಿದೆ. ಡಾಲರ್‌ನ ದುರ್ಬಲತೆ ಮತ್ತು ಅಮೆರಿಕ ಫೆಡರಲ್ ರಿಸರ್ವ್‌ನಿಂದ ಬೆಳವಣಿಗೆಯ ಮೇಲೆ ನಿಷೇಧದ ಸಾಧ್ಯತೆಯೂ ಈ ಏರಿಕೆಗೆ ಕಾರಣವಾಗಿದೆ. ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಹಣದುಬ್ಬರದ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಏರುತ್ತಲೇ ಇರುತ್ತದೆ. ಇಂದು ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) 420 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ 10 ಗ್ರಾಂ ಚಿನ್ನದ ದರ 55,598 ರೂಪಾಯಿ ಆಗಿದೆ.
ಬೆಳ್ಳಿ 1229 ರೂಪಾಯಿ ಏರಿಕೆ ಕಂಡಿದ್ದು, ಪ್ರತಿ ಕೆಜಿಗೆ 70,800 ರೂಪಾಯಿಗೆ ತಲುಪಿದೆ. ನಿನ್ನೆಯ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 69,571 ರೂಪಾಯಿ ಮತ್ತು ಚಿನ್ನದ ಬೆಲೆ 10 ಗ್ರಾಂಗೆ 55,178 ರೂಪಾಯಿ ಇತ್ತು.ಈ ಹಿಂದೆ 2020ರ ಆಗಸ್ಟ್‌ನಲ್ಲಿ ಚಿನ್ನವು ದಾಖಲೆಯ 56,200 ರೂಪಾಯಿಗೆ ತಲುಪಿತ್ತು. ಸದ್ಯದಲ್ಲೇ ಬಂಗಾರ ಇನ್ನೂ ದುಬಾರಿಯಾಗುವ ಸಾಧ್ಯತೆ ಇದೆ.