ಮುಂದಿನ ವರ್ಷದಿಂದ ಕಾರು ಖರೀದಿ ಬಲು ದುಬಾರಿಯಾಗಲಿದೆ. ಟಾಟಾ ಮೋಟಾರ್ಸ್ ಗ್ರಾಹಕರಿಗೆ ಇದು ಹೊರೆಯಾಗಿ ಪರಿಣಮಿಸಲಿದೆ. ಈ ಕಂಪನಿಯ ಕಾರು ಖರೀದಿ ಮಾಡುವವರಿಗೆ ಇದೊಂದು ಶಾಕಿಂಗ್ ನ್ಯೂಸ್. 2023 ರ ಏಪ್ರಿಲ್ ಒಂದರಿಂದ ಏರಿದ ಬೆಲೆಯ ಕಾರು ಲಭ್ಯ ಇವೆ. ಇಂತದೊಂದು ವಿಚಾರವನ್ನು ಟಾಟಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.
ಹೌದು, ಮುಂದಿನ ತಿಂಗಳಿನಿಂದ ಈ ಕಂಪನಿಯು ತನ್ನ ಪ್ಯಾಸೆಂಜರ್ ವೆಹಿಕಲ್ಸ್ ಬೆಲೆಗಳಲ್ಲಿ ಹೆಚ್ಚಳ ಮಾಡುವ ಚಿಂತನೆ ನಡೆಸಿದೆಯಂತೆ. ಬೆಲೆ ಏರಿಕೆಯಿಂದ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವೂ ಕಡಿಮೆಯಾಗುತ್ತದೆ ಎಂದು ಶೈಲೇಶ್ ಚಂದ್ರ ಹೇಳಿದ್ದಾರೆ. ಇನ್ನು ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಕಟ್ಟುನಿಟ್ಟಾದ ಹೊರಸೂಸುವಿಕೆ ನಿಯಮಗಳ ಅನ್ವಯ ಕಾರು ದರ ಏರಿಕೆ ಆಗಲಿದೆ.
ಇನ್ನು, ಮುಂದುವರೆದು ಮಾತನಾಡಿದ ಅವರು, ಸದ್ಯ ಬ್ಯಾಟರಿಗಳ ಬೆಲೆಯೂ ಕೂಡ ಹೆಚ್ಚಾಗಿದೆ. ಆದರೆ ಅದರ ಹೊರೆಯನ್ನು ಮಾರುಕಟ್ಟೆಗೆ ಹಾಕಿಲ್ಲ. ಬೇರೆ ಬೇರೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರೋದ್ರಿಂದ ನಾವೂ ಕೂಡ ಬೆಲೆ ಏರಿಕೆ ಮಾಡುವ ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಬ್ಯಾಟರಿ ಬೆಲೆಗಳು ಮತ್ತು ಹೊಸ ನಿಯಮಗಳು EV ವಿಭಾಗದ ಮೇಲೆ ಪರಿಣಾಮ ಬೀರಿವೆ ಎಂದರು.