ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ ಮನೆಯೊಳಗೆ ಸಾಮಾನುಗಳೆಲ್ಲ ಬಂದ ಮೇಲೆ ಮನೆಯ ಮೂಲೆ ಮೂಲೆ ಕ್ಲೀನ್ ಮಾಡೋದು ಕಷ್ಟ.
ಮೊದಲು ಮನೆ ಕೆಲಸ ಬೇಗ ಆಗುವಂತಹ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಪೊರಕೆ, ಕಾಟನ್ ಬಟ್ಟೆ, ಸ್ಕ್ರಬಿಂಗ್, ಹ್ಯಾಂಡ್ ಗ್ಲೋಸ್ ಗಳನ್ನು ಮರೆಯದೆ ತೆಗೆದುಕೊಂಡು ಹೋಗಿ. ಧೂಳಿನಿಂದ ಅಲರ್ಜಿಯಾಗುವವರು ಮಾಸ್ಕ್ ಕೂಡ ಧರಿಸಬಹುದು. ಸ್ವಚ್ಛಗೊಳಿಸಲು ಡಿಟರ್ಜಂಟ್ ನ್ನು ಅವಶ್ಯವಾಗಿ ತೆಗೆದುಕೊಂಡು ಹೋಗಿ. ಡೆಟಾಲ್ ಕೂಡ ಬಳಸಬಹುದು.
ಮನೆಯನ್ನು ಮೇಲಿನಿಂದ ಕೆಳಗೆ ಸ್ವಚ್ಛಗೊಳಿಸಬೇಕು. ಮೊದಲು ಮೇಲ್ಭಾಗ, ಕಪಾಟಿನ ಮೇಲೆ, ಗೋಡೆಗಳನ್ನು ಸ್ವಚ್ಛಗೊಳಿಸಿದ ನಂತರ ನೆಲವನ್ನು ಸ್ವಚ್ಛಗೊಳಿಸಿ. ನೀವು ಹೋಗುತ್ತಿರುವ ಮನೆ ಅನೇಕ ದಿನಗಳಿಂದ ಬಾಗಿಲು ಮುಚ್ಚಿದ್ದಲ್ಲಿ ಧೂಳಿನ ಪ್ರಮಾಣ ಜಾಸ್ತಿ ಇರುತ್ತದೆ.
ಮನೆಯ ಕೆಲ ಜಾಗಗಳ ಬಗ್ಗೆ ನಾವು ಅಷ್ಟಾಗಿ ಗಮನ ನೀಡುವುದಿಲ್ಲ. ಆದ್ರೆ ಮನೆ ಬದಲಾಯಿಸುವ ವೇಳೆ ಆ ಜಾಗಗಳನ್ನು ಮುಖ್ಯವಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಕೋಣೆಗಳ ಮೂಲೆ, ಕಪಾಟಿನ ತಲೆ, ಕಿಟಕಿ ಸರಳು, ಗಾಜುಗಳು, ಟ್ಯೂಬ್ಲೈಟ್, ಫ್ಯಾನ್ ಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
ಭವಾನಿ ಶಾಸಕರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಪುನರುಚ್ಛರಿಸಿದ ಹೆಚ್.ಡಿ. ರೇವಣ್ಣ
ಸಾಮಾನ್ಯವಾಗಿ ನಾವು ಸಾಕಷ್ಟು ಸಮಯವನ್ನು ಬೆಡ್ ರೂಂನಲ್ಲಿ ಕಳೆಯುತ್ತೇವೆ. ಹಾಗಾಗಿ ಮಲಗುವ ಕೋಣೆಯ ಮೂಲೆ ಮೂಲೆಯನ್ನು ಶಿಫ್ಟ್ ಆಗುವ ಮುನ್ನವೇ ಕ್ಲೀನ್ ಮಾಡಬೇಕು.
ಶೌಚಾಲಯವನ್ನು ಸ್ವಚ್ಛಗೊಳಿಸುವುದು ಅಷ್ಟೇ ಮುಖ್ಯ. ಯಾವುದೇ ಟಾಯ್ಲೆಟ್ ಕ್ಲೀನರ್ ಬಳಸಿ ನೀವು ಶೌಚಾಲಯವನ್ನು ಸ್ವಚ್ಛಗೊಳಿಸಬಹುದು. ಆದ್ರೆ ನಂತರ ಅಡುಗೆ ಸೋಡಾವನ್ನು ಬಳಸಿದ್ರೆ ದುರ್ಗಂಧವನ್ನು ಹೋಗಲಾಡಿಸಬಹುದು.
ಅಡುಗೆ ಮನೆಯನ್ನು ಮೊದಲು ಸ್ವಚ್ಛ ಮಾಡಿಟ್ಟುಕೊಳ್ಳಿ. ಅಡುಗೆ ಮನೆಯ ಬೇಸಿನ್ ಅನ್ನು ಅವಶ್ಯವಾಗಿ ಕ್ಲೀನ್ ಮಾಡಿ.