ಮನೆಯ ಅಡುಗೆ ಮನೆಯ ವಾಸ್ತು ಸರಿಯಾಗಿ ಇಲ್ಲವೆಂದರೆ ಮನೆಯಲ್ಲಿ ಯಾವುದೂ ಶಾಂತಿಯಿಂದ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಅಡುಗೆ ಮನೆಯ ವಾಸ್ತು ಮಹಿಳೆಯರ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಹೀಗಾಗಿ ಅಡುಗೆ ಮನೆಯ ವಿಚಾರದಲ್ಲಿ ನೀವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿ ಇಡಲೇಬೇಕು.
ಅಡುಗೆ ಮನೆಯನ್ನು ಎಂದಿಗೂ ಆಗ್ನೇಯ ದಿಕ್ಕಿನಲ್ಲಿಯೇ ನಿರ್ಮಾಣ ಮಾಡಬೇಕು. ಒಂದು ವೇಳೆ ಈ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಾಣ ಮಾಡುವುದು ಅಸಾಧ್ಯವಾಗದಿದ್ದರೆ ವಾಯುವ್ಯ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನೊಂದು ಮುಖ್ಯ ಅಂಶ ಏನೆಂದರೆ ಸಿಂಕ್ ಎಂದಿಗೂ ಉತ್ತರ ದಿಕ್ಕಿನಲ್ಲಿಯೇ ಇರಬೇಕು. ಹಾಗೂ ಅಡುಗೆ ಮಾಡುವ ಜಾಗವು ಆಗ್ನೇಯ ದಿಕ್ಕಿಗೆ ಮುಖ ಮಾಡಿರಬೇಕು. ಅಡುಗೆ ಕೋಣೆಯ ಎತ್ತರವು 10 ರಿಂದ 11 ಅಡಿ ಇರಬೇಕು. ಇದಕ್ಕಿಂತ ಕಡಿಮೆ ಎತ್ತರವನ್ನು ಹೊಂದಿದ್ದರೆ ಅದು ಮನೆಯ ಮಹಿಳೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಇದರ ಜೊತೆಯಲ್ಲಿ ಅಡುಗೆ ಕೋಣೆಯ ದಕ್ಷಿಣ ದಿಕ್ಕಿನಲ್ಲಿ ಯಾವುದೇ ಕಿಟಕಿ ಅಥವಾ ಬಾಗಿಲು ಇರಬಾರದು. ಪೂರ್ವ ದಿಕ್ಕಿನಲ್ಲಿ ಕಿಟಕಿಯನ್ನು ನಿರ್ಮಾಣ ಮಾಡುವುದು ಸೂಕ್ತ.