ಡ್ಯೂಕ್ ಮೋಟರ್ ಸೈಕಲ್‌ಗಳು ಇನ್ಮೇಲೆ ಹೊಚ್ಚ ಹೊಸ ಬಣ್ಣಗಳಲ್ಲಿ ಲಭ್ಯವಾಗಲಿವೆ. ಸದ್ಯ ಡ್ಯೂಕ್ ಸರಣಿಯ 4 ಮೋಟರ್ ಸೈಕಲ್‌ಗಳು ಮಾರುಕಟ್ಟೆಯಲ್ಲಿವೆ.
125 ಸಿಸಿ, 200 ಸಿಸಿ, 250 ಸಿಸಿ, ಮತ್ತು 390 ಸಿಸಿ ಡ್ಯೂಕ್ ಬೈಕ್‌ಗಳು ಈಗಾಗ್ಲೇ ಭಾರತದಲ್ಲಿ ಜನಪ್ರಿಯವಾಗಿವೆ. ಕೆಟಿಎಂ ಇಂಡಿಯಾ ಹೊಚ್ಚ ಹೊಸ ಬಣ್ಣಗಳನ್ನು ಪರಿಚಯಿಸಿರುವುದರಿಂದ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ.
ಬಣ್ಣ ಹೊಸದಾದ್ರೂ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಹಳೆಯ ದರಗಳಲ್ಲೇ ಡ್ಯೂಕ್ ಬೈಕ್‌ಗಳು ಮಾರಾಟವಾಗ್ತಿವೆ. ಕೆಟಿಎಂ ಡ್ಯೂಕ್ 390 ಎರಡು ಹೊಸ ಬಣ್ಣಗಳಲ್ಲಿ ಈಗ ಲಭ್ಯವಿದೆ. ಲಿಕ್ವಿಡ್ ಮೆಟಲ್ ಹಾಗೂ ಡಾರ್ಕ್ ಗಾಲ್ವನೋ ಕಲರ್‌ನಲ್ಲಿ ಬೈಕ್‌ಗಳನ್ನು ಸಿದ್ಧಪಡಿಸಲಾಗಿದೆ.
ಡಾರ್ಕ್ ಗಾಲ್ವನೋ ಮ್ಯಾಟ್ ಬ್ಲಾಕ್ ಫಿನಿಶ್‌ನಲ್ಲಿದ್ದು, ಗ್ರಾಹಕರಿಗೆ ಸಿಕ್ಕಾಪಟ್ಟೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಫ್ರೇಮ್, ಬ್ರಾಂಡಿಂಗ್ ಮತ್ತು ಎಂಜಿನ್ ಮಾತ್ರ ಕೇಸರಿ ಬಣ್ಣದಲ್ಲಿದೆ. ಲಿಕ್ವಿಡ್ ಮೆಟಲ್ ಕೂಡ ಮ್ಯಾಟ್ ಬ್ಲಾಕ್ ಮತ್ತು ಆರೇಂಜ್ ಕಾಂಬಿನೇಷನ್‌ನಲ್ಲೇ ಇದೆ. ಆದ್ರೆ ಕೇಸರಿ ಬಣ್ಣವನ್ನು ಹೆಚ್ಚಾಗಿ ಬಳಸಲಾಗಿದೆ.
ಡ್ಯೂಕ್ 250 ಎಬೊನಿ ಬ್ಲಾಕ್ ಕಲರ್‌ನಲ್ಲಿ ಹೊಸದಾಗಿ ಬರ್ತಾ ಇದೆ. ಇದು ಕೂಡ ಕಪ್ಪು ಮತ್ತು ಕೇಸರಿ ಕಾಂಬಿನೇಷನ್. ಡ್ಯೂಕ್ 200 ಅನ್ನು ಡಾರ್ಕ್ ಸಿಲ್ವರ್ ಮೆಟಾಲಿಕ್‌ನಲ್ಲಿ ಹೊರತರಲಾಗ್ತಿದೆ. ಇದು ಹಳೆಯ ಬೈಕ್‌ಗಿಂತ ಸಖತ್ ಡಿಫರೆಂಟ್ ಆಗಿದೆ. ಗ್ಲಾಸ್ ಗ್ರೇ, ಮ್ಯಾಟ್ ಗ್ರೇ ಹಾಗೂ ಆರೇಂಜ್ ಕಾಂಬಿನೇಷನ್‌ನಲ್ಲಿದೆ. ಡ್ಯೂಕ್ 125 ಅನ್ನು ಸೆರಾಮಿಕ್ ವೈಟ್ ಕಲರ್‌ನಲ್ಲಿ ಹೊಸದಾಗಿ ಪರಿಚಯಿಸಲಾಗ್ತಿದೆ. ಇದು ಬಿಳಿ, ಕಪ್ಪು ಮತ್ತು ಕೇಸರಿ ಬಣ್ಣಗಳ ಮಿಶ್ರಣದಲ್ಲಿದೆ.