ಬಹುಕೋಟಿ ಹಗರಣದ ವಂಚಕ ಸುಖೇಶ್ ಚಂದ್ರಶೇಖರ್ ಜೊತೆಗಿನ ಸಂಬಂಧದಿಂದಾಗಿ ಭಾರೀ ಸುದ್ದಿಯಲ್ಲಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಂಚಿಕೊಂಡಿಕೊಂಡಿರುವ ಅದೊಂದು ಫೋಟೋ ಭಾರೀ ವೈರಲ್ ಆಗ್ತಿದೆ. ಇದಕ್ಕೆ ಬಾಲಿವುಡ್ ನಟರಾದ ವರುಣ್ ಧವನ್, ನಿರ್ಮಾಪಕ ರೋಹಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಆದರೆ ಇದೇ ಫೋಟೋಗೆ ಗಾಯಕ ಮಿಕಾ ಸಿಂಗ್ ನೀಡಿರುವ ಪ್ರತಿಕ್ರಿಯೆ ಗಮನಸೆಳೆದಿದ್ದು ನಂತರ ಅದನ್ನ ಗಾಯಕ ಡಿಲೀಟ್ ಮಾಡಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ ಹಾಲಿವುಡ್ ಆಕ್ಷನ್ ಲೆಜೆಂಡ್ ಜೀನ್-ಕ್ಲೌಡ್ ವ್ಯಾನ್ ಡ್ಯಾಮ್ ಅವರೊಂದಿಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ಜಾಕ್ವೆಲಿನ್ ನಟಿಸುತ್ತಿರುವ ವೆಲ್ ಕಮ್ 3 ಚಿತ್ರದ ಸಹನಟ, ಗಾಯಕ ಮಿಕಾಸಿಂಗ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ “ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಅವರು ಸುಕೇಶ್ ಗಿಂತ ಉತ್ತಮವಾಗಿದ್ದಾರೆ” ಎಂದು ಫೋಟೋಗೆ ಪ್ರತಿಕ್ರಿಸಿದ್ದರು. ಅದು ಕೆಲವೇ ಸಮಯದಲ್ಲಿ ವೈರಲ್ ಆಗಿತ್ತು. ಆದಾಗ್ಯೂ ನಂತರ ಮಿಕಾಸಿಂಗ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಇದರೊಂದಿಗೆ ವರುಣ್ ಧವನ್ ಮತ್ತು ರೋಹಿತ್ ಶೆಟ್ಟಿ ಸಹ ಜಾಕ್ವೆಲಿನ್ ಹಂಚಿಕೊಂಡಿದ್ದ ಫೋಟೋಗೆ ಪ್ರಶಂಸೆ ವ್ಯಕ್ತಪಡಿಸಿ, ನೀವು ಯಾವಾಗಲೂ ಎತ್ತರಕ್ಕೆ ಏರಲು ಬಯಸುತ್ತೀರಿ, ಆಲ್ ದಿ ಬೆಸ್ಟ್ ಎಂದು ಶುಭಕೋರಿದ್ದರು.
ಜಾಕ್ವೆಲಿನ್ ಫೆರ್ನಾಂಡಿಸ್ ಇಟಲಿಯಲ್ಲಿ ಜೀನ್ ಕ್ಲೌಡ್ ವ್ಯಾನ್ ಡ್ಯಾಮ್ ಅವರನ್ನು ಭೇಟಿಯಾಗಿ ಫೋಟೋವನ್ನು ಪೋಸ್ಟ್ ಮಾಡಿ”ಇಟಲಿಯಲ್ಲಿ ಮೋಜು ಮಾಡಿ #ರಜೆಯ #ಫ್ಯಾಶನ್ #ಫನ್ ” ಎಂದು ಬರೆದಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸುಖೇಶ್ ಜೊತೆ ನಟಿ ಜಾಕ್ವೆಲಿನ್ ಹೆಸರು ಥಳುಕು ಹಾಕಿಕೊಂಡಿದ್ದು ಈ ಪ್ರಕರಣದಲ್ಲಿ ನಟಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಹಲವು ಬಾರಿ ಪ್ರಶ್ನಿಸಿದೆ.