ಹೊಸ ಸ್ಟೈನ್ ಲೆಸ್ ಪಾತ್ರೆಗಳನ್ನು ಕೊಂಡುಕೊಂಡಾಗ ಅದರಲ್ಲಿ ಸ್ಟಿಕ್ಕರ್ ಅಂಟಿಸಿರುತ್ತಾರೆ. ಉಗುರುಗಳ ಸಹಾಯದಿಂದ ತೆಗೆಯಲು ಹೋದರೆ ಸರಿಯಾಗಿ ಬರುವುದಿಲ್ಲ.
ಅರ್ಧಂಬರ್ಧ ಅಲ್ಲೇ ಉಳಿದು ಬಿಡುತ್ತದೆ ಹಾಗೂ ಸಾಕಷ್ಟು ಸಮಯವೂ ವ್ಯರ್ಥವಾಗುತ್ತದೆ. ಉಗುರುಗಳು ಹಾಳಾಗುತ್ತವೆ. ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಸ್ಟಿಕ್ಕರ್ ತೆಗೆಯಬಹುದು. ಅದು ಹೇಗೆ ಅಂತ ನೋಡಿ.
* ಹೊಸ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಬೇಕು. ಇದರಿಂದ ಸ್ಟಿಕರ್ ನಲ್ಲಿರುವ ಅಂಟು ಕರಗುತ್ತದೆ. ಆಗ ಸುಲಭವಾಗಿ ಸ್ಟಿಕ್ಕರ್ ತೆಗೆಯಬಹುದು.
* ಸಣ್ಣ ಪಾತ್ರೆಗಳ ಸ್ಟಿಕರ್ ತೆಗೆಯಲು ಲೈಟರ್, ಕ್ಯಾಂಡಲ್, ಬೆಂಕಿಕಡ್ಡಿ ಬಳಸಿ ಸ್ಟಿಕ್ಕರ್ ಬಿಸಿ ಮಾಡಿದರೆ ಸ್ಟಿಕ್ಕರ್ ಸುಲಭವಾಗಿ ಬರುತ್ತದೆ.
* ಚಿಕ್ಕ ಪೇಪರ್, ಟವಲ್ ಅಥವಾ ಮೃದುವಾದ ಬಟ್ಟೆಯನ್ನು ಮಡಚಿ ಅದರ ಮೇಲೆ ಎಣ್ಣೆ ಅಥವಾ ಆಲೀವ್ ಎಣ್ಣೆ ಹಾಕಿ ಸ್ಟಿಕ್ಕರ್ ಮೇಲೆ ಉಜ್ಜಿ. ಸ್ಟಿಕ್ಕರ್ ಎಣ್ಣೆಯಲ್ಲಿ ನೆನೆಯುವವರೆಗೂ ಬಟ್ಟೆಯಿಂದ ಚೆನ್ನಾಗಿ ಸವರಿ. ಸ್ವಲ್ಪ ನಿಮಿಷಗಳ ನಂತರ ಸುಲಭವಾಗಿ ಸ್ಟಿಕ್ಕರ್ ತೆಗೆಯಬಹುದು.
* ಕೈ ಬೆರಳುಗಳಿಂದ ಕೊಬ್ಬರಿ ಎಣ್ಣೆ ತೆಗೆದುಕೊಂಡು ಸ್ಟಿಕ್ಕರ್ ಮೇಲೆ ಸವರಿ. ಸ್ಟಿಕ್ಕರ್ ನ ಎಲ್ಲಾ ಅಂಚುಗಳು ಎಣ್ಣೆಯಲ್ಲಿ ನೆನೆಯುವವರೆಗೂ ಚೆನ್ನಾಗಿ ಸವರಿ. ಸ್ವಲ್ಪ ಸಮಯದ ನಂತರ ಸ್ಟಿಕ್ಕರ್ ಹಗುರವಾಗುತ್ತದೆ. ಆಗ ಸುಲಭವಾಗಿ ಪಾತ್ರೆಯಿಂದ ಸ್ಟಿಕ್ಕರ್ ತೆಗೆಯಬಹುದು.