ಬೆಳಿಗ್ಗೆ ದೋಸೆ ಮಾಡಬೇಕು ಎಂದು ಹಿಟ್ಟೆಲ್ಲಾ ರೆಡಿ ಮಾಡಿಟ್ಟುಕೊಂಡಿರುತ್ತೇವೆ. ಬೆಳಿಗ್ಗೆ ಎದ್ದು ಹಿಟ್ಟು ಕಾವಲಿಗೆ ಹಾಕಿದರೆ ದೋಸೆ ಜಪ್ಪಯ್ಯ ಎಂದರೂ ಏಳುವುದಿಲ್ಲ. ಆಗ ಎಲ್ಲಾ ಕೆಲಸ ಹಾಳಾಗುತ್ತದೆ. ದೋಸೆ ಕಾವಲಿಯನ್ನು ಸರಿಯಾಗಿ ಪಳಗಿಸದೇ ಇದ್ದಾಗ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇನ್ನು ಹೊಸದಾಗಿ ತೆಗದುಕೊಂಡ ತವಾವನ್ನು ಸರಿಯಾಗಿ ಪಳಗಿಸಬೇಕು ಆಗ ದೋಸೆ ಚೆನ್ನಾಗಿ ಏಳುತ್ತದೆ. ಇಲ್ಲಿ ಕೆಲವೊಂದಿಷ್ಟು ಟಿಪ್ಸ್ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ದೋಸೆ ತವಾದಲ್ಲಿ ಚಪಾತಿ ಮಾಡಬಾರದು. ಇದರಿಂದ ತವಾ ಬೇಗನೆ ಹಾಳಾಗುತ್ತದೆ. ಹಾಗೇ ದೋಸೆ ಕೂಡ ಏಳುವುದಿಲ್ಲ.
ದೋಸೆ ತವಾವನ್ನು ತೊಳೆಯುವಾಗ ಮೆಟಲ್ ಸ್ಕ್ರಬರ್ ಅಥವಾ ಡಿಶ್ ವಾಶರ್ ಸೋಪ್ ಬಳಸಬೇಡಿ. ಸಬೀನಾದಂತಹ ಪೌಡರ್ ಬಳಸಿ.
ಹೊಸದಾಗಿ ತೆಗೆದುಕೊಂಡ ತವಾವನ್ನು ಮೊದಲು ಚೆನ್ನಾಗಿ ನೀರಿನಿಂದ ತೊಳೆದು ನಂತರ ಅದಕ್ಕೆ 2 ಟೀ ಸ್ಪೂನ್ ನಷ್ಟು ಎಣ್ಣೆ, 2 ಟೀ ಸ್ಪೂನ್ ನಷ್ಟು ಉಪ್ಪು ಹಾಕಿ ಚೆನ್ನಾಗಿ ಎಲ್ಲಾ ಕಡೆ ಸವರಿ ಒಂದು ದಿನ ಹಾಗೇ ಬಿಟ್ಟು ಬಿಡಿ. ಮಾರನೇ ದಿನ ಇದನ್ನು ಕ್ಲೀನ್ ಮಾಡಿ.
ನಂತರ ಅನ್ನ ಬಸಿದ ನೀರಲ್ಲಿ ಇದನ್ನು 2 ದಿನ ನೆನೆಸಿ ಇಡಿ. ನಂತರ ಚೆನ್ನಾಗಿ ತೊಳೆದು. ಗ್ಯಾಸ್ ಮೇಲೆ ಇಟ್ಟು 2 ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿ ಅದಕ್ಕೆ ಒಂದು ಈರುಳ್ಳಿಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಇದನ್ನು ಕ್ಲೀನ್ ಮಾಡಿ ದೋಸೆ ಮಾಡುವುದಕ್ಕೆ ಉಪಯೋಗಿಸಿ.