
ಸಾಗರ್ ಕೆ ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್’ ಚಿತ್ರದ ‘ಲಾಲಾ ಭೀಮ್ಲಾ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ನಿನ್ನೆ ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಈ ಹಾಡು 11ಮಿಲಿಯನ್ ವೀಕ್ಷಣೆ ಪಡೆದುಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲೇ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಹಾಡು ಎಂಬ ದಾಖಲೆ ಬರೆದಿದೆ.
ಮೆಟ್ರೋ ಸ್ಟೇಶನ್ ನಲ್ಲಿ ಹಳದಿ ಟೈಲ್ಸ್ ಹಾಕುವುದೇಕೆ ಗೊತ್ತಾ….?
ಸಿತಾರ ಎಂಟರ್ಟೇನ್ಮೆಂಟ್ಸ್ ಬ್ಯಾನರ್ ನಡಿ ಸೂರ್ಯದೇವರ ನಾಗವಂಶಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪವನ್ ಕಲ್ಯಾಣ್ ಸೇರಿದಂತೆ ರಾಣಾ ದಗ್ಗುಬಾಟಿ, ನಿತ್ಯಾ ಮೆನನ್ ಹಾಗೂ ಸಂಯುಕ್ತ ಮೆನನ್ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಸ್ ತಮನ್ ಸಂಗೀತವಿದೆ.
