
ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಈ ವರ್ಷ ಜಪಾನ್ ಮಾರುಕಟ್ಟೆಯಲ್ಲಿ ತನ್ನ ಐದನೇ ಜನರೇಶನ್ ಪ್ರವೇಶಿಸಲು ಸಿದ್ಧವಾಗಿದೆ. ವರದಿಯ ಪ್ರಕಾರ ಹ್ಯಾಚ್‌ಬ್ಯಾಕ್‌ನ ಜಾಗತಿಕ ಪ್ರೀಮಿಯರ್ 2023ರ ಕೊನೆಯಲ್ಲಿ ನಡೆಯಲಿದೆ. ಸ್ವಿಫ್ಟ್‌ನ ಸ್ಪೋರ್ಟಿಯರ್ ಆವೃತ್ತಿಯನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ನಡೆಸಿದೆ. ನೆಕ್ಸ್ಟ್ ಜನರೇಶನ್ ಸ್ವಿಫ್ಟ್ ಅನ್ನು ಫೆಬ್ರವರಿ 2024 ರಲ್ಲಿ ಭಾರತಕ್ಕೂ ಪರಿಚಯಿಸೋ ಸಾಧ್ಯತೆ ಇದೆ.
ಮಾರುತಿ ಸುಜುಕಿ ಪ್ರಸ್ತುತ ಸ್ವಿಫ್ಟ್ ಸ್ಪೋರ್ಟ್ ಅನ್ನು ಭಾರತಕ್ಕೆ ತರುವ ಯಾವುದೇ ಯೋಜನೆಯನ್ನು ಹೊಂದಿಲ್ಲ.ಪ್ರಮುಖ ಅಪ್‌ಗ್ರೇಡ್ ಅದರ ಪವರ್ ಟ್ರೇನಲ್ಲಿ ಇರುತ್ತದೆ. ಟೊಯೊಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಆಲ್ ನ್ಯೂ ಸ್ವಿಫ್ಟ್‌ನಲ್ಲಿ ಕಾಣಬಹುದು. ಪವರ್ಟ್ರೇನ್ 1.2 ಲೀ, 3-ಸಿಲಿಂಡರ್ ಪೆಟ್ರೋಲ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಈ ಕಾರಿನಲ್ಲಿ ಇರಲಿದೆ. ಇದರ ಮೈಲೇಜ್ ಸುಮಾರು ಗಂಟೆಗೆ 35 ಕಿಮೀ ಆಗಿರಬಹುದು ಎಂಬ ಅಂದಾಜಿದೆ.
1.2L ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಬಳಕೆಯನ್ನು ಮುಂದುವರಿಸುವ ಸಾಧ್ಯತೆಯಿದೆ. ಇದು CNG ಇಂಧನ ಆಯ್ಕೆಯೊಂದಿಗೆ ಬರಬಹುದು. ಹ್ಯಾಚ್‌ಬ್ಯಾಕ್ ಪ್ರಸ್ತುತ ಮಾದರಿಯಂತೆಯೇ 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿರಲಿದೆ. ಹೊಸ ಸ್ವಿಫ್ಟ್ ಸ್ಪೋರ್ಟ್ ಸೌಮ್ಯ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.4L K14D ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದೆ.ಸ್ವಿಫ್ಟ್‌ನ ಹೊರಭಾಗದಲ್ಲೂ ವ್ಯಾಪಕವಾದ ಬದಲಾವಣೆಗಳನ್ನು ಕಾಣಬಹುದು. ಮುಂಭಾಗದಲ್ಲಿ ಹೊಸ ಗ್ರಿಲ್, ಹೊಸ ಎಲ್ಇಡಿ, ಸ್ಲೀಕರ್ ಹೆಡ್‌ಲ್ಯಾಂಪ್‌ಗಳು, ಫಾಕ್ಸ್ ಏರ್ ವೆಂಟ್‌ಗಳು ಮತ್ತು ಪರಿಷ್ಕೃತ ಬಂಪರ್‌ನೊಂದಿಗೆ ಸ್ವಿಫ್ಟ್‌ಗೆ ಹೊಸ ಲುಕ್ ಬರಲಿದೆ. ಸ್ವಿಫ್ಟ್ ಹೊಸ ಬಾಡಿ ಪ್ಯಾನೆಲ್‌ಗಳು ಮತ್ತು ಬ್ಲ್ಯಾಕ್ಡ್ ಔಟ್ ಪಿಲ್ಲರ್‌ಗಳನ್ನು ಸಹ ಪಡೆಯಬಹುದು.