
ಹೌದು, ಹೊಸ ವರ್ಷ 2022ಕ್ಕೆ ಕೌಂಟ್ ಡೌನ್ ಶುರುವಾಗಿದೆ. 2021 ರಿಂದ 2022ಕ್ಕೆ ಹೊಸ ಭರವಸೆ ಹಾಗೂ ಸಕಾರಾತ್ಮಕತೆಯಿಂದ ಪ್ರಾರಂಭಿಸಲು ಹಲವಾರು ಮಂದಿ ಭರ್ಜರಿ ಸೆಲೆಬ್ರೇಷನ್ ಮಾಡುತ್ತಾರೆ. ಇತರರು 2022 ರ ಹೊಸ ವರ್ಷವನ್ನು ನಗುವಿನೊಂದಿಗೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ.
ಕೆಲವರು ಸೆಲೆಬ್ರೇಷನ್ ನಲ್ಲಿ ಬ್ಯುಸಿಯಾಗಿದ್ದರೆ, ಇನ್ನು ಕೆಲವರು ಮೊಬೈಲ್ ನಲ್ಲಿ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಸಂದೇಶಕ್ಕೆ, ಧನ್ಯವಾದ ನಿಮಗೂ ಕೂಡ ಶುಭಾಶಯ ಎನ್ನುವ ಮೆಸೇಜ್ ಮಾಡುವುದರಲ್ಲೇ ಹೊಸವರ್ಷವನ್ನು ಸ್ವಾಗತಿಸುತ್ತಿದ್ದೇವೆ ಎಂಬಂತಹ ಮೀಮ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ನಿಮ್ಮ ಮನಸ್ಸನ್ನು ಹಗುರವಾಗಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕೆಲವು ಮೀಮ್ಸ್ ಗಳು ಇಲ್ಲಿವೆ..