ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು ನಿಮಗೆ ಗೊತ್ತೇ?
ಕ್ಯಾರೆಟ್ನಲ್ಲಿ ವಿಟಮಿನ್ ಸಿ, ಎ ಮತ್ತು ಇ ಇದ್ದು, ತ್ವಚೆಯಲ್ಲಿ ಕಾಣಿಸುವ ವಯಸ್ಸಾದ ಲಕ್ಷಣಗಳನ್ನು ಇದು ದೂರಗೊಳಿಸಿ ಮುಖದ ರಕ್ತಸಂಚಾರ ಹೆಚ್ಚಿಸುತ್ತದೆ. ಮೊಗವನ್ನು ಕಾಂತಿಯುತ ಹಾಗೂ ಯೌವನಯುತವಾಗಿ ಕಾಣುವಂತೆ ಮಾಡುತ್ತದೆ.
ಕ್ಯಾರೆಟ್ ಮಾಸ್ಕ್ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೊಡವೆ, ನೆರಿಗೆ, ಕಲೆಯಂತಹ ಸಮಸ್ಯೆಯಿಂದ ಮುಕ್ತಿ ದೊರಕಿಸಿ ಕೊಡುತ್ತದೆ.
ಕ್ಯಾರೆಟ್ ಪೇಸ್ಟ್ ಗೆ ಬಾದಾಮಿ ಎಣ್ಣೆ ಬೆರೆಸಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ಒಂದು ಗಂಟೆ ಬಳಿಕ ತೊಳೆದರೆ ಹೊಳೆಯುವ ಮುಖಾರವಿಂದ ನಿಮ್ಮದಾಗುತ್ತದೆ. ಇದನ್ನು ವಾರಕ್ಕೆರಡು ಬಾರಿ ಮಾಡಬಹುದು.
ಕ್ಯಾರೆಟ್ ನೊಂದಿಗೆ ಕಡ್ಲೆಹಿಟ್ಟು, ಸೌತೆಕಾಯಿ, ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಕಣ್ಣಿನ ಕೆಳಭಾಗ, ಗಲ್ಲ, ಕೆನ್ನೆ, ಕುತ್ತಿಗೆ ಕೆಳಭಾಗದಲ್ಲಿ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆದರೂ ಮುಖಕ್ಕೆ ಅತ್ಯುತ್ತಮ ಗ್ಲೋ ಸಿಗುತ್ತದೆ.