ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದೇ ಈಗ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ತಲೆಹೊಟ್ಟು, ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತದೆ.
ಸರಿಯಾದ ಊಟ ನಿದ್ರೆ ಇಲ್ಲದಿರುವುದು, ಧೂಳು, ಬಿಸಿಲಿನಿಂದ ಕೂದಲು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಮನೆಯಲ್ಲಿಯೇ ಸಿಗುವ ಒಂದಷ್ಟು ವಸ್ತುಗಳಿಂದ ಪ್ಯಾಕ್ ತಯಾರಿಸಿಕೊಂಡು ಹಚ್ಚಿಕೊಂಡರೆ ಕೂದಲು ಚೆನ್ನಾಗಿ ಬೆಳೆಯುತ್ತದೆ ಹಾಗೂ ಆರೋಗ್ಯಯುತವಾಗಿರುತ್ತದೆ.
* 1 ಬಾಳೆಹಣ್ಣು, 2 ಟೀ ಸ್ಪೂನ್ ಜೇನುತುಪ್ಪ, 3 ದೊಡ್ಡ ಚಮಚ ಮೊಸರು ಇವಿಷ್ಟನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಕಿವುಚಿ. ಪೇಸ್ಟ್ ರೀತಿ ಮಾಡಿಕೊಳ್ಳಿ. ನಂತರ ಇದನ್ನು ತಲೆಕೂದಲಿಗೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.
* 1 ಕಪ್ ಮೊಸರು, 2 ದೊಡ್ಡ ಚಮಚ ನೆಲ್ಲಿಕಾಯಿ ಪುಡಿ. ಇವೆರೆಡನ್ನು ಒಂದು ಬೌಲ್ ಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಿ.
* 1 ಮೊಟ್ಟೆ, 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ, 1 ಟೇಬಲ್ ಸ್ಪೂನ್ ಜೇನುತುಪ್ಪ. ಇವಿಷ್ಟನ್ನು ಒಂದು ಬೌಲ್ ಗೆ ಮೊಟ್ಟೆ ಒಡೆದುಕೊಂಡು ಹಾಕಿ ನಂತರ ಉಳಿದ ಸಾಮಾಗ್ರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದರ ಪ್ಯಾಕ್ ಅನ್ನು ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಕೂದಲನ್ನು ತೊಳೆದುಕೊಳ್ಳಿರಿ.
*1/4 ಕಪ್ ಮೆಂತೆಕಾಳನ್ನು ರಾತ್ರಿ ನೆನೆಸಿಡಿ. ಬೆಳಿಗ್ಗೆ ಒಂದು ಮಿಕ್ಸಿ ಜಾರಿಗೆ 1 ಕಪ್ ನೀರು, ಮೆಂತೆ ಸೇರಿಸಿಕೊಂಡು ನಯವಾಗಿ ರುಬ್ಬಿಕೊಳ್ಳಿ. ಈ ಪ್ಯಾಕ್ ಅನ್ನು ನಿಮ್ಮ ತಲೆಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ಹಾಗೇಯೇ ಬಿಡಿ. ಆಮೇಲೆ ತಲೆಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಇದನ್ನು ಹಚ್ಚಿಕೊಳ್ಳುವುದರಿಂದ ಕೂದಲು ನಯವಾಗಿ, ಉದ್ದವಾಗಿ ಬೆಳೆಯುತ್ತದೆ.