ಬ್ಯುಸಿ ಲೈಫಲ್ಲಿ ನಮ್ಮ ಅಂದ – ಚಂದದ ಕಡೆಗೆ ಗಮನ ಹರಿಸೋಕೆ ಸಮಯವಿಲ್ಲ ಎನ್ನುವಂತಹ ಪರಿಸ್ಥಿತಿ. ನಮ್ಮ ಚರ್ಮದ ಆರೈಕೆಯನ್ನೂ ನಾವು ಮರೆತಿದ್ದೇವೆ.
ಒಮ್ಮೊಮ್ಮೆ ದಿಢೀರನೆ ಯಾವುದೋ, ಪಾರ್ಟಿ ಅಥವಾ ಫಂಕ್ಷನ್ ಗೆ ಹೋಗಬೇಕಾಗಿ ಬರುತ್ತೆ. ಆಗೆಲ್ಲ ಅಯ್ಯೋ ನನ್ನ ಸ್ಕಿನ್ ಹೀಗಾಗಿದ್ಯಲ್ಲಾ, ಏನ್ಮಾಡೋದು ಅನ್ನೋ ಚಿಂತೆ ಸಹಜ. ನೀವು ಕೇವಲ 20 ನಿಮಿಷಗಳಲ್ಲಿ ನಿಮ್ಮ ಚರ್ಮಕ್ಕೆ ಹೊಳಪು ನೀಡಬಹುದು. ಅದಕ್ಕಾಗಿ ನೀವು ಪಾರ್ಲರ್ ಗೆ ಹೋಗಬೇಕಾಗಿಲ್ಲ.
ಆಲೂಗಡ್ಡೆ, ಬ್ಲೀಚಿಂಗ್ ಏಜೆಂಟ್ ನಂತೆ ಕಾರ್ಯ ನಿರ್ವಹಿಸುತ್ತದೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಚರ್ಮವನ್ನು ಬೆಳ್ಳಗಾಗಿಸುತ್ತದೆ. ಮುಖದ ಮೇಲೆ ಮೊಡವೆಗಳಿದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ. ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ, ಐದು ನಿಮಿಷಗಳ ನಂತರ ಮುಖ ತೊಳೆಯಿರಿ.
ಟೊಮ್ಯಾಟೋಗಳಲ್ಲಿ ಉತ್ಕರ್ಷಣ ಮತ್ತು ಹೊಳಪಿನ ಶಕ್ತಿಯಿದೆ. ಟೊಮ್ಯಾಟೋ ತಿರುಳನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮೊಡವೆ ಕಲೆಗಳು ಮಾಯವಾಗಿ, ಮುಖ ಕಾಂತಿಯುಕ್ತವಾಗುತ್ತದೆ.
ಪಪ್ಪಾಯಿ ಹಣ್ಣು ಕೂಡ ಮ್ಯಾಜಿಕ್ ಮಾಡಬಲ್ಲದು. ಪಪ್ಪಾಯಿ ಹಣ್ಣಿನ ಸಿಪ್ಪೆ ತೆಗೆದು ಸ್ವಲ್ಪ ಪೇಸ್ಟ್ ನಂತೆ ಮಾಡಿಕೊಳ್ಳಿ. ಅದಕ್ಕೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ.
ಎಷ್ಟೇ ಸುಸ್ತಾಗಿದ್ದರೂ, ಬ್ಯುಸಿಯಾಗಿದ್ದರೂ ರಾತ್ರಿ ಮಲಗುವ ಮುನ್ನ ಮುಖ ತೊಳೆಯಲು ಮರೆಯಬೇಡಿ, ಬೆಳಗ್ಗೆ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ.