ಕೋಝಿಕ್ಕೋಡ್: ಕೇರಳದ ವ್ಯಕ್ತಿಯೊಬ್ಬರು ತಮ್ಮ ಸಮಯೋಚಿತ ಮಧ್ಯಪ್ರವೇಶದಿಂದ ಭಾರಿ ಅಗ್ನಿ ದುರಂತವನ್ನು ತಪ್ಪಿಸಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದಾರೆ.
ವಯನಾಡಿನಿಂದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಭಾನುವಾರ ಕೇರಳದ ಕೊಡಂಚೇರಿಯಲ್ಲಿ ಈ ಘಟನೆ ನಡೆದಿದೆ. ಇದರಿಂದ ಗಾಬರಿಗೊಂಡ ಟ್ರಕ್ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದನ್ನು ಗಮನಿಸಿದ ಶಾಜಿ ವರ್ಗೀಸ್ ಎಂಬುವವರು ಆಗಲಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ. ತಡಮಾಡದ ಅವರು ಉರಿಯುತ್ತಿದ್ದ ಲಾರಿ ಹತ್ತಿ ತೆರೆದ ಮೈದಾನದತ್ತ ಚಲಾಯಿಸಿದ್ದಾರೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಫೋಸ್ಟ್ ನಲ್ಲಿ ಇಡೀ ಘಟನೆಯನ್ನು ವರದಿಯನ್ನು ವಿವರಿಸಿದ್ದಾರೆ. ಇನ್ನು ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ʼಕಚಾ ಬಾದಾಮ್ʼ ಸೃಷ್ಟಿಸಿದ ಸೆನ್ಸೇಷನ್ ಬಳಿಕ ಸಂಗೀತದತ್ತ ಒಲವು ತೋರಿದ ಕಡಲೆಕಾಯಿ ಮಾರಾಟಗಾರ..!
ವಿದ್ಯುತ್ ತಂತಿಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಒಣಹುಲ್ಲಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಶಾಜಿ ವರ್ಗೀಸ್ ಅವರು ಲಾರಿಯನ್ನು ಓಡಿಸುತ್ತಾ, ಹುಲ್ಲು ನೆಲದ ಮೇಲೆ ಬೀಳುವ ರೀತಿಯಲ್ಲಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕೋಝಿಕ್ಕೋಡ್ ಸಮೀಪದ ತಮ್ಮ ಗ್ರಾಮದಲ್ಲಿ ಶಾಜಿ ಪಪ್ಪನ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಶಾಜಿ ವರ್ಗೀಸ್ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಇವರನ್ನು ರಿಯಲ್ ಹೀರೋ ಎಂದೇ ಬಣ್ಣಿಸಿದ್ದಾರೆ.
https://twitter.com/vaisakh_aryan/status/1487961083000229889?ref_src=twsrc%5Etfw%7Ctwcamp%5Etweetembed%7Ctwterm%5E1487961083000229889%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fkerala-man-drives-burning-truck-to-safety-earns-praise-from-netizens-watch-dramatic-video-5220253%2F