ಹೆರಿಗೆಯ ನಂತರ ಹೊಟ್ಟೆಯ ಭಾಗದಲ್ಲಿ ಶೇಖರವಾದ ಕೊಬ್ಬನ್ನು ಕರಗಿಸುವುದು ನಿಜವಾದ ಸವಾಲು. ಅದರಲ್ಲೂ ಸಿಸೇರಿಯನ್ ಹೆರಿಗೆಯಾದ ಬಳಿಕ ಹೊಟ್ಟೆಗೆ ಬಟ್ಟೆ ಅಥವಾ ಬೆಲ್ಟ್ ಕಟ್ಟಲೂ ಅವಕಾಶವಿಲ್ಲದೆ ದೊಡ್ಡ ಹೊಟ್ಟೆಯ ಅರ್ಧ ಭಾಗ ಅಲ್ಲೇ ಉಳಿದು ಬಿಡುತ್ತದೆ.
ಇದನ್ನು ಕರಗಿಸಲು ಇಲ್ಲೊಂದು ಟಿಪ್ಸ್ ಇದೆ. ನಾರಿನಂಶ ಹೇರಳವಾಗಿರುವ ಅಗಸೆ ಬೀಜ ನಿಮಗಿಲ್ಲಿ ನೆರವಾಗಬಹುದು. ಇದು ದೇಹ ತೂಕವನ್ನು ನಿಯಂತ್ರಿಸುತ್ತದೆ. ನಿತ್ಯ ಇದನ್ನು ಬಳಸಿದರೆ ನಿಮ್ಮ ತ್ವಚೆಗೂ ಹೊಳಪು ಬರುತ್ತದೆ. ದೇಹ ತೂಕವೂ ನಿಯಂತ್ರಣಕ್ಕೆ ಬರುತ್ತದೆ. ನಿತ್ಯ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.
ಇನ್ನು ಎರಡು ಚಮಚ ಜೀರಿಗೆಗೆ ಎರಡು ಚಮಚ ಓಂ ಕಾಳು ಸೇರಿಸಿ. ದಾಲ್ಚಿನಿ ಸೇರಿಸಿ ಸಣ್ಣ ಉರಿಯಲ್ಲಿಟ್ಟು ಹುರಿಯಿರಿ. ಬಿಸಿ ತಣ್ಣಗಾದ ಬಳಿಕ ಪುಡಿ ಮಾಡಿ ತೆಗೆದಿಟ್ಟುಕೊಳ್ಳಿ. ಒಂದು ಲೋಟ ನೀರಿಗೆ ಒಂದು ಚಮಚ ಈ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಅರ್ಧ ಲೋಟಕ್ಕೆ ಇಳಿಸಿ.
ಲಿಂಬೆ ರಸ ಹಿಂಡಿ ನಿತ್ಯ ಕುಡಿಯಿರಿ. ನಿತ್ಯ ಬೆಳಿಗ್ಗೆ ಹೀಗೆ ಮಾಡುವುದರಿಂದ ಒಂದು ತಿಂಗಳಲ್ಲಿ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ. ಜೀರಿಗೆಗೆ ಕೊಬ್ಬನ್ನು ಕರಗಿಸುವ ಶಕ್ತಿ ಇದ್ದರೆ ಓಂಕಾಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.