
ಆಯುರ್ವೇದದ ಪ್ರಕಾರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. ಏಲಕ್ಕಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದ್ರಿಂದ ತೂಕ ಕಡಿಮೆಯಾಗುತ್ತದೆ.
ಟೀಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ನೀವು ಸೇವನೆ ಮಾಡಬಹುದು. ಸಂಶೋಧನೆ ಪ್ರಕಾರ ಏಲಕ್ಕಿ ಪುಡಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆಯಂತೆ. ಪ್ರತಿದಿನ ಸೇವನೆ ಮಾಡುವುದರಿಂದ ಯಾವುದೇ ದುಷ್ಪರಿಣಾಮವಿಲ್ಲ.
ಚಳಿಗಾಲದಲ್ಲಿ ಹಾಗೂ ವಾಹನ ದಟ್ಟಣೆಯಿಂದ ಉಸಿರು ಕಟ್ಟಿದಂತಾಗುವವರಿಗೆ ಏಲಕ್ಕಿ ಒಳ್ಳೆಯ ಮನೆ ಮದ್ದು. ಹಬೆ ತೆಗೆದುಕೊಳ್ಳುವ ವೇಳೆ ಬಿಸಿ ನೀರಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ.
ಆರೋಗ್ಯಕರ ಹೃದಯಕ್ಕಾಗಿ ಪ್ರತಿದಿನ ಏಲಕ್ಕಿ ಸೇವನೆ ಒಳ್ಳೆಯದು. ಏಲಕ್ಕಿ ಟೀ ಕುಡಿಯುತ್ತ ಬಂದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುವುದಿಲ್ಲ.
ಅಜೀರ್ಣ ಸಮಸ್ಯೆಯಿರುವವರಿಗೆ ಏಲಕ್ಕಿ ಟೀ ಬೆಸ್ಟ್. ಪ್ರತಿದಿನ ಬೆಳಗ್ಗೆ ಏಲಕ್ಕಿ ಟೀ ಕುಡಿಯಬೇಕು. ನೀರಿಗೆ ಮೂರ್ನಾಲ್ಕು ಏಲಕ್ಕಿ ಕಾಳು, ಶುಂಠಿ ತುಂಡು, 2 ಲವಂಗ, ಕೊತ್ತಂಬರಿ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ. ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ ಸಮಸ್ಯೆಯನ್ನೂ ಇದು ದೂರ ಮಾಡುತ್ತದೆ.
ಆಹಾರ ಸೇವನೆ ನಂತ್ರ ನಾಲ್ಕು ಕಾಳು ಏಲಕ್ಕಿ ತಿನ್ನುವುದರಿಂದ ಬಾಯಿಯ ವಾಸನೆ ಕಡಿಮೆಯಾಗುತ್ತದೆ. ಹಾಗೆ ಆ್ಯಸಿಡಿಟಿ ದೂರವಾಗುತ್ತದೆ.