ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೊಟ್ಟೆ ನೋವನ್ನು ತಕ್ಷಣ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಓಮ : ಜೀರ್ಣಕ್ರಿಯೆಗೆ ಓಮ ಬಹಳ ಒಳ್ಳೆಯದು. ಇದು ಅಜೀರ್ಣ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡ್ರೆ ಬಿಸಿ ನೀರಿಗೆ ಓಮನ್ನು ಸೇರಿಸಿ ಕುಡಿಯಿರಿ.
ಇಂಗು : ಹೊಟ್ಟೆ ನೋವಿಗೆ ಇಂಗು ರಾಮಬಾಣ. ನೀರಿಗೆ ಇಂಗನ್ನು ಬೆರೆಸಿ ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
ಪುದೀನಾ : ಆಹಾರದ ರುಚಿ ಹೆಚ್ಚಿಸಲು ಹಾಗೂ ಸುವಾಸನೆಗಾಗಿ ಪುದೀನಾ ಬಳಸಲಾಗುತ್ತದೆ. ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಪುದೀನಾ ಟೀ ಮಾಡಿ ಕುಡಿಯುವುದು ಒಳ್ಳೆಯದು.
ಜೀರಿಗೆ ಮತ್ತು ಕರಿಮೆಣಸು : ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಿಸಿಕೊಂಡಲ್ಲಿ ಜೀರಿಗೆ, ಕರಿ ಮೆಣಸಿನ ಪುಡಿ ಜೊತೆ ಉಪ್ಪು ಬೆರೆಸಿ ತಿನ್ನುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.