ದಿನವಿಡಿ ಕುಳಿತು ಕೆಲಸ ಮಾಡುವುದು, ಅತಿಯಾದ ಟೀ ಸೇವನೆ, ಸಮತೋಲನ ಆಹಾರದ ಕೊರತೆಯಿಂದ ಗ್ಯಾಸ್ ಸಮಸ್ಯೆ ಕಾಡುತ್ತದೆ. ಈ ಗ್ಯಾಸ್ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಮದ್ದಿದೆ. ಕೆಲವೇ ಕ್ಷಣಗಳಲ್ಲಿ ಹೊಟ್ಟೆಯಲ್ಲಿ ಕಾಡುವ ಗ್ಯಾಸ್ ಗೆ ಗುಡ್ ಬೈ ಹೇಳ್ಬಹುದು.
ಅಡುಗೆ ಮನೆಯಲ್ಲಿರುವ ಓಂ ಕಾಳು ನಿಮ್ಮ ಗ್ಯಾಸ್ ಸಮಸ್ಯೆಗೆ ಒಳ್ಳೆಯ ಪರಿಹಾರ. ಗ್ಯಾಸ್ ನಿಂದ ಬಳಲುವವರು ಅರ್ಧ ಚಮಚ ಓಂ ಕಾಳನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದಿ ನೀರು ಕುಡಿಯಬೇಕು.
ಗ್ಯಾಸ್ ಗೆ ಇನ್ನೊಂದು ಪರಿಹಾರವೆಂದ್ರೆ ಜಿರಿಗೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಹೊಟ್ಟೆಗೆ ಆರಾಮ ನೀಡುತ್ತದೆ. ಒಂದು ಚಮಚ ಜೀರಿಗೆ ನೀರನ್ನು ಎರಡು ಲೋಟ ನೀರಿಗೆ ಹಾಕಿ 10 ನಿಮಿಷ ಕುದಿಸಿ ಕುಡಿಯಬೇಕು.
ಅರ್ಧ ಚಮಚ ಹಿಂಗನ್ನು ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯುವುದ್ರಿಂದಲೂ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
ಶುಂಠಿ ಕೂಡ ಗ್ಯಾಸ್ ಸಮಸ್ಯೆಗೆ ಪರಿಹಾರ ನೀಡಬಲ್ಲದು. ತಾಜಾ ಶುಂಠಿಗೆ ಸ್ವಲ್ಪ ಉಪ್ಪು ಸೇರಿಸಿ ತಿನ್ನಬೇಕು. ಶುಂಠಿ ಟೀ ಕೂಡ ಸೇವಿಸಬಹುದು. ನೀರಿಗೆ ಶುಂಠಿ ಹಾಕಿ ಕುದಿಸಿ ಅದ್ರ ನೀರು ಸೇವನೆ ಮಾಡುವುದು ಕೂಡ ಉತ್ತಮ.
ಅಡುಗೆ ಸೋಡಾ ಹಾಗೂ ನಿಂಬೆ ರಸ ತ್ವರಿತವಾಗಿ ಗ್ಯಾಸ್ ಸಮಸ್ಯೆ ಕಡಿಮೆ ಮಾಡುತ್ತದೆ. ಒಂದು ಕಪ್ ನೀರಿನಲ್ಲಿ ಒಂದು ಟೀಸ್ಪೂನ್ ನಿಂಬೆ ರಸ, ಅರ್ಧ ಟೀ ಚಮಚ ಅಡುಗೆ ಸೋಡಾ ಬೆರೆಸಿ ಕುಡಿಯಿರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.