ಕೊಬ್ಬು ಕರಗಿಸಿಕೊಳ್ಳೋದು ಸುಲಭದ ಮಾತಲ್ಲ. ವ್ಯಾಯಾಮ, ಜಿಮ್ ಅದು ಇದು ಅಂತಾ ಏನೇ ಕಸರತ್ತು ಮಾಡಿದ್ರೂ ಕೊಬ್ಬು ಮಾತ್ರ ಕಡಿಮೆಯಾಗೋದಿಲ್ಲ.
ಮಾರುಕಟ್ಟೆಯಲ್ಲಿ ಸಿಗುವ ಔಷಧಿ, ಮಾತ್ರೆ ನುಂಗಿ ಯಡವಟ್ಟು ಮಾಡಿಕೊಂಡದ್ದೂ ಆಯ್ತು. ಆದ್ರೆ ಹೊಟ್ಟೆ ದೊಡ್ಡದಾಗೋದು ಕಡಿಮೆಯಾಗಿಲ್ಲ ಎನ್ನುವವರು ಯಾವುದೇ ಅಡ್ಡಪರಿಣಾಮವಿಲ್ಲದ ಈ ಆಹಾರಗಳನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿ.
ಬೆಳ್ಳುಳ್ಳಿ : ಬೆಳ್ಳುಳ್ಳಿ ಒಂದು ನೈಸರ್ಗಿಕ ಆಂಟಿ ಬಯೋಟಿಕ್. ಶುಗರ್ ನಿಯಂತ್ರಣ ಮಾಡುವ ಕೆಲಸವನ್ನೂ ಇದು ಮಾಡುತ್ತದೆ. ಕೊಬ್ಬು ಕರಗಿಸುವ ಹಾರ್ಮೋನುಗಳನ್ನು ಸಕ್ರಿಯವಾಗಿರಿಸುತ್ತದೆ ಬೆಳ್ಳುಳ್ಳಿ. ಹಾಗಾಗಿ ನಿಮ್ಮ ಡಯೆಟ್ ನಲ್ಲಿ ಬೆಳ್ಳುಳ್ಳಿ ಅವಶ್ಯವಾಗಿರಲಿ.
ಗ್ರೀನ್ ಟೀ : ಇತ್ತೀಚಿನ ವರ್ಷಗಳಲ್ಲಿ ಗ್ರೀನ್ ಟೀ ಪ್ರಸಿದ್ಧಿ ಪಡೆದಿದೆ. ಇದ್ರಲ್ಲಿರುವ catechins ಕೊಬ್ಬು ಕರಗಿಸಲು ನೆರವಾಗುತ್ತದೆ.
ಬಾಳೆ ಹಣ್ಣು : ಫಾಸ್ಟ್ ಫುಡ್ ತಿನ್ನುವ ಗೀಳು ನಿಮಗಿದ್ದರೆ ಈಗ್ಲೇ ಬಾಳೆಹಣ್ಣು ತಿನ್ನಲು ಶುರುಮಾಡಿ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶ ಫಾಸ್ಟ್ ಫುಡ್ ತಿನ್ನುವ ನಿಮ್ಮ ಬಯಕೆಯನ್ನು ಕಡಿಮೆ ಮಾಡುತ್ತದೆ.
ಪುದೀನಾ : ಬಿಸಿ ನೀರಿಗೆ ಮೂರ್ನಾಲ್ಕು ಪುದೀನಾ ಎಲೆಗಳನ್ನು ಹಾಕಿ. ಬೇಕಾದಲ್ಲಿ ಹನಿ ಜೇನುತುಪ್ಪ ಹಾಕಿ ಈ ನೀರನ್ನು ಕುಡಿಯುತ್ತ ಬನ್ನಿ. ಹೊಟ್ಟೆಯ ಕೊಬ್ಬು ಕರಗಿಸಲು ಇದು ಬೆಸ್ಟ್.
ದಾಲ್ಚಿನಿ : ಕಡಿಮೆ ಸಮಯದಲ್ಲಿ ತೂಕ ಕಡಿಮೆ ಮಾಡಿಕೊಳ್ಳಬಯಸುವವರು ದಾಲ್ಚಿನಿ ಉಪಯೋಗಿಸಿ. ಬೆಳಿಗ್ಗೆ ಉಪಹಾರಕ್ಕಿಂತ ಮೊದಲು ಹಾಗೂ ರಾತ್ರಿ ಮಲಗುವ ಮೊದಲು ನೀವು ದಾಲ್ಚಿನಿ ತಿನ್ನಬೇಕು. ಒಂದು ಕಪ್ ನೀರಿಗೆ ಒಂದು ಚಮಚ ದಾಲ್ಚಿನಿ ಪುಡಿಯನ್ನು ಹಾಕಿ. ಈ ನೀರನ್ನು ದಿನಕ್ಕೆರಡು ಬಾರಿ ಸೇವನೆ ಮಾಡುವುದರಿಂದ ತೂಕ ವೇಗವಾಗಿ ಕಡಿಮೆಯಾಗುತ್ತದೆ.
ಸೇಬು ಹಣ್ಣು : ದಿನಕ್ಕೊಂದು ಸೇಬು ತಿಂದ್ರೆ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಾ. ಈ ಸೇಬು ನಿಮ್ಮ ತೂಕ ಕಡಿಮೆ ಮಾಡಲೂ ಸಹಕಾರಿ. ಇದ್ರಲ್ಲಿರುವ ಪೊಟ್ಯಾಶಿಯಂ ಹಸಿವನ್ನು ಕಡಿಮೆ ಮಾಡುತ್ತದೆ.
ಒಮೆಗಾ 3 : ಒಮೆಗಾ 3 ಅಂಶ ಜಾಸ್ತಿ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ.