ಆಧುನಿಕ ಆಹಾರ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಅನಾರೋಗ್ಯಕರ ಜೀವನ ಶೈಲಿ ನಮ್ಮದಾಗುತ್ತಿದೆ. ಬಾಯಿಗೆ ರುಚಿ ನೀಡುವ ಎಲ್ಲವನ್ನೂ ಸೇವಿಸಿದ ಪರಿಣಾಮ ಹೊಟ್ಟೆಯಲ್ಲಿ ಕಲ್ಮಶಗಳೇ ಸೇರಿಕೊಂಡಿವೆ.
ಅದನ್ನು ಹೊರಹಾಕುವ ಸರಳ ವಿಧಾನ ಎಂದರೆ ಅತ್ಯಂತ ಸ್ವಲ್ಪ ಪ್ರಮಾಣದ ಹರಳೆಣ್ಣೆಯ ಸೇವನೆ. ಇದರಿಂದ ಹೊಟ್ಟೆಯ ವಿಷಕಾರಿ ಅಂಶಗಳು ಹೊರಹೋಗುತ್ತವೆ.
ಪಪ್ಪಾಯ ಎಲೆಗಳಿಗೂ ಈ ಶಕ್ತಿ ಇದೆ. ಮೂರು ಚಮಚ ಪಪ್ಪಾಯ ಎಲೆಗಳ ರಸಕ್ಕೆ ಒಂದು ದೊಡ್ಡ ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಇದ್ದ ಕಲ್ಮಶಗಳು ಮತ್ತು ಕ್ರಿಮಿಗಳು ಹೊರದಬ್ಬಲ್ಪಡುತ್ತದೆ.
ಇದರ ಸೇವನೆಯಿಂದ ಹೊಟ್ಟೆ ಮತ್ತು ಕರಳುಗಳಲ್ಲಿ ಇದ್ದ ಸೂಕ್ಷ್ಮ ಜೀವಿ ಮತ್ತು ಬ್ಯಾಕ್ಟೀರಿಯಾಗಳು ಹೊರ ಹೋಗಿ ಹೊಟ್ಟೆ ಶುದ್ಧಗೊಳ್ಳುತ್ತದೆ.