ಕರಿದ ತಿಂಡಿಗಳೆಂದ್ರೆ ಎಲ್ಲರಿಗೂ ಫೇವರಿಟ್. ಅನಾರೋಗ್ಯಕರ ಜಂಕ್ ಫುಡ್‌ಗಳನ್ನು ನಾವು ತಿನ್ನುತ್ತಲೇ ಇರುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳನ್ನು ಹಲವು ಬಾರಿ ಎದುರಿಸಿಸುತ್ತೇವೆ. ಕೆಲವೊಮ್ಮೆ ಹೊಟ್ಟೆಯಿಂದ ವಿಚಿತ್ರವಾದ ಶಬ್ಧ ಬರಲು ಪ್ರಾರಂಭಿಸುತ್ತದೆ. ಆಗ ನಾವು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೂ ಈ ರೀತಿ ಹೊಟ್ಟೆಯಲ್ಲಿ ಶಬ್ಧ ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಹೊಟ್ಟೆಯಿಂದ ಶಬ್ದ ಏಕೆ ಬರುತ್ತದೆ?
ಹೊಟ್ಟೆಯಲ್ಲಿ ಗುರು ಗುರು ಎಂಬ ಶಬ್ದವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೊಟ್ಟೆ ಗ್ರೋಲಿಂಗ್ ಎಂದು ಕರೆಯಲಾಗುತ್ತದೆ. ನಮ್ಮ ಆಹಾರವು ಜೀರ್ಣವಾಗುವಾಗ, ಈ ಶಬ್ದವು ಹೊಟ್ಟೆ ಮತ್ತು ಕರುಳಿನ ನಡುವೆ ಬರುತ್ತದೆ. ಅಂತಹ ಶಬ್ದವು ಒಂದೆರಡು ಬಾರಿ ಕೇಳಿದರೆ, ಭಯಪಡುವ ಅಗತ್ಯವಿಲ್ಲ. ಆದರೆ ದಿನವಿಡೀ ಇದೇ ರೀತಿ ಆಗುತ್ತಿದ್ದರೆ ಅದು ಗಂಭೀರ ಕಾಯಿಲೆಯ ಸಂಕೇತವಿರಬಹುದು. ಆಹಾರವು ಜೀರ್ಣಕ್ರಿಯೆಗಾಗಿ ಸಣ್ಣ ಕರುಳನ್ನು ತಲುಪಿದಾಗ, ದೇಹವು ಆಹಾರಗಳ ವಿಭಜನೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗಾಗಿ ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಹಸಿವಾದಾಗ ಹೊಟ್ಟೆಯಲ್ಲಿ ಗುರ್ ಗುರ್ ಶಬ್ಧವಾಗುತ್ತದೆ. ಶಬ್ಧ ಜಾಸ್ತಿಯಿದ್ದರೆ ತಕ್ಷಣ ತಜ್ಞ ವೈದ್ಯರನ್ನು ಭೇಟಿ ಮಾಡಿ ಮತ್ತು ಹೊಟ್ಟೆಯನ್ನು ಪರೀಕ್ಷಿಸಿಕೊಳ್ಳಿ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಅದನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವುದು ಬಹಳ ಮುಖ್ಯ.
ಶಬ್ಧ ಬರದಂತೆ ಮಾಡುವುದು ಹೇಗೆ?
ಹೊಟ್ಟೆಯಿಂದ ಗುರಗುರು ಸದ್ದು ಬರುತ್ತಿದ್ದರೆ ನೀರನ್ನು ಜಾಸ್ತಿ ಕುಡಿಯಿರಿ. ಆಗಾಗ ಲಘು ಆಹಾರ ಸೇವಿಸುತ್ತಿರಿ. ಬಯಸಿದರೆ ದಿನಕ್ಕೆ ಎರಡು ಬಾರಿ ಗ್ರೀನ್ ಟೀ ಕುಡಿಯಬಹುದು. ಇದನ್ನು ನಿಯಮಿತವಾಗಿ ಮಾಡುವುದರಿಂದ ಹೊಟ್ಟೆಯಿಂದ ಬರುವ ಶಬ್ಧ ನಿಲ್ಲುವ ಸಾಧ್ಯತೆ ಇರುತ್ತದೆ.