ಕೆಲವೊಮ್ಮೆ ಹೊರಗಿನ ಆಹಾರ ಸೇವಿಸಿ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿರುತ್ತದೆ. ಇದರಿಂದ ವಿಪರೀತ ಹೊಟ್ಟೆನೋವು, ವಾಂತಿ, ಬೇಧಿಯಾಗುತ್ತದೆ. ಈ ಸಮಸ್ಯೆಗೆ ಔಷಧಿಗಳನ್ನು ಸೇವಿಸಿ ಮತ್ತಷ್ಟು ಹಾನಿಮಾಡಿಕೊಳ್ಳುವ ಬದಲು ಈ ಮನೆದ್ದನ್ನು ಸೇವಿಸಿ ಅದನ್ನು ಗುಣಪಡಿಸಿಕೊಳ್ಳಿ.
*ಈರುಳ್ಳಿ : ಇದು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುತ್ತದೆ. ಇದರಿಂದ ಹೊಟ್ಟೆಯಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡಬಹುದು. ಹಾಗಾಗಿ ನೀವು ಕಚ್ಚಾ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಿ ಸೇವಿಸಬಹದು. ಅಥವಾ ಈರುಳ್ಳಿ ರಸ ತೆಗೆದು ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ. ಇದನ್ನು ಮಕ್ಕಳಿಗೂ ನೀಡಬಹುದು.
* ಬೆಳ್ಳುಳ್ಳಿ : ಇದು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿ ವಿರೋಧಿ ಗುಣಗಳನ್ನು ಹೊಂದಿದೆ. ಇದು ರೋಗಕಾರಕ ಬ್ಯಾಕ್ಟೀರಿಯಾ, ವೈರಸ್ ಗಳನ್ನು ನಾಶಮಾಡುತ್ತದೆ. ಆದಕಾರಣ ಬೆಳ್ಳುಳ್ಳಿಗೆ ಲವಂಗ ಸೇರಿಸಿ ಜಜ್ಜಿ ಸ್ವಲ್ಪ ಹೊತ್ತು ಇಟ್ಟು ಬಳಿಕ ಸೇವಿಸಿ. ಇದರಿಂದ ಅದರ ಪ್ರತಿರೋಧ ಶಕ್ತಿ ಹೆಚ್ಚಾಗಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇದನ್ನು ಮಕ್ಕಳಿಗೆ ನೀಡಬೇಡಿ.