ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ ಹಾಗೂ ಮೂಗಿನಲ್ಲಿ ಯಾವಾಗಲೂ ತುರಿಕೆಯಾಗುವುದು ಇದರ ಲಕ್ಷಣಗಳು.
ಮನೆಮದ್ದಿನ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಜಂತು ಹುಳು ನಿವಾರಣೆಗೆ ಕೆಲವು ಮದ್ದುಗಳು ಹೀಗಿವೆ.
ಓಂಕಾಳನ್ನು ಕುಟ್ಟಿ ಪುಡಿ ಮಾಡಿ, ಸ್ವಲ್ಪ ಬೆಲ್ಲ ಸೇರಿಸಿ. ಬೆಳಿಗ್ಗೆ ಖಾಲಿಹೊಟ್ಟೆಗೆ ಕೊಟ್ಟ ಮೇಲೆ ಅರ್ಧ ಗಂಟೆ ಏನನ್ನು ತಿನ್ನಬಾರದು ಮತ್ತು ಕುಡಿಯಬಾರದು. ಈ ಮನೆ ಮದ್ದನ್ನು ನಿರಂತರವಾಗಿ 7 ದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಕುದಿಸಿದ ನೀರಿಗೆ 10 ರಿಂದ 15 ಲವಂಗ ಹಾಕಿ. ಈ ನೀರನ್ನು 10 ನಿಮಿಷ ಮುಚ್ಚಿಡಿ. ನಂತರ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದನ್ನು 7 ದಿನಗಳವರೆಗೆ ಮಾಡುವುದರಿಂದ ಜಂತುಹುಳುಗಳು ಸಾಯುತ್ತವೆ