ಹೊಟೇಲ್ ಗೆ ಹೋಗುವ ಮುನ್ನ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳಿ. ಹೊಟೇಲ್ ರೂಂ ಸಣ್ಣದಾಗಿರಲಿ ಇಲ್ಲ ದೊಡ್ಡದಾಗಿರಲಿ ಬೆಡ್ ಶೀಟ್ ಬಿಳಿ ಬಣ್ಣದಲ್ಲಿರುತ್ತದೆ. ಹೊಟೇಲ್ ಕೋಣೆಯಲ್ಲಿರುವ ಬೆಡ್ ಶೀಟ್ ಬಿಳಿ ಬಣ್ಣದಲ್ಲಿರಲು ಅನೇಕ ಕಾರಣಗಳಿವೆ.
ಬಿಳಿ ಬಣ್ಣ ಕಣ್ಣಿಗೆ ತಂಪು ನೀಡುತ್ತದೆ. ಬಿಳಿ ಬಣ್ಣ ಶಾಂತಿಯ ಸಂಕೇತ. ಬೇರೆ ಬಣ್ಣಕ್ಕಿಂತ ಬಿಳಿ ಬಣ್ಣವನ್ನು ನೋಡಿದಾಗ ಮನಸ್ಸು ಶಾಂತಗೊಳ್ಳುತ್ತದೆ. ಬಿಳಿಯನ್ನು ಪವಿತ್ರವೆಂದೂ ಪರಿಗಣಿಸಲಾಗಿದೆ.
ಬೇರೆ ಬಣ್ಣಕ್ಕಿಂತ ಬಿಳಿ ಬಣ್ಣದಲ್ಲಿ ಕೊಳಕಾಗಿದ್ದು ಬೇಗ ಕಾಣಿಸುತ್ತದೆ. ಕೊಳಕಾದ ತಕ್ಷಣ ಹೊಟೇಲ್ ಸಿಬ್ಬಂದಿ ಬೆಡ್ ಶೀಟ್ ಸ್ವಚ್ಛಗೊಳಿಸ್ತಾರೆ. ಇಲ್ಲ ಬೆಡ್ ಶೀಟ್ ಬದಲಾಯಿಸ್ತಾರೆ. ಕೊಳಕು ಸ್ಪಷ್ಟವಾಗಿ ಕಾಣಲಿ ಎನ್ನುವ ಕಾರಣಕ್ಕೆ ಕೋಣೆಯಲ್ಲಿ ಬಿಳಿ ಬೆಡ್ ಶೀಟ್ ಇಡಲಾಗುತ್ತದೆ.
ಬಿಳಿ ಬಣ್ಣದ ಬಟ್ಟೆಯನ್ನು ಬ್ಲೀಚ್ ಮಾಡುವುದು ಬಹಳ ಸುಲಭ. ಯಾವುದೇ ಕಲೆಯಾದ್ರೂ ಸುಲಭವಾಗಿ ಬ್ಲೀಚ್ ಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡೇ ಹೊಟೇಲ್ ನಲ್ಲಿ ಬಿಳಿ ಬಣ್ಣದ ಬೆಡ್ ಶೀಟ್ ಬಳಸಲಾಗುತ್ತದೆ.
ಒತ್ತಡ ಕಡಿಮೆ ಮಾಡಿಕೊಂಡು ಎಂಜಾಯ್ ಮಾಡಲು ಜನ್ರು ಪ್ರವಾಸಕ್ಕೆ ಹೋಗ್ತಾರೆ. ಹೊಟೇಲ್ ನಲ್ಲಿ ಕಾಲ ಕಳೆಯುತ್ತಾರೆ. ಇಂಥ ಸಂದರ್ಭದಲ್ಲಿ ಬಿಳಿ ಬಟ್ಟೆ ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಸ್ವಚ್ಛ ಹಾಗೂ ಸುಂದರ ಪ್ರದೇಶ ಮನಸ್ಸಿನ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ.
1990ರ ವೇಳೆಗೆ ಬಣ್ಣದ ಬೆಡ್ ಶೀಟ್ ಗಳನ್ನು ಬಳಸಲಾಗ್ತಿತ್ತು. ವೆಸ್ಟಿನ್ ಹೊಟೇಲ್ ಯಾವುದು ಸೂಕ್ತ ಎನ್ನುವ ಬಗ್ಗೆ ಸಂಶೋಧನೆ ನಡೆಸ್ತು. ಅತಿಥಿಗಳಿಗೆ ಐಷಾರಾಮಿ ಬೆಡ್ ಅರ್ಥವೇನು ಎಂಬುದನ್ನು ಸಂಶೋಧನೆಯಲ್ಲಿ ಹೇಳಲಾಯ್ತು. ಸಂಶೋಧನೆ ವರದಿ ಬಂದ ನಂತ್ರ ಎಲ್ಲ ಹೊಟೇಲ್ ಗಳಲ್ಲಿ ಬಿಳಿ ಬಟ್ಟೆಯನ್ನು ಬಳಸುವ ಪದ್ಧತಿ ಜಾರಿಗೆ ಬಂತು.