ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಇಂಗನ್ನು ಬಳಸ್ತಾರೆ. ರಸಂ, ಸಾಂಬಾರ್ ನಂತಹ ಪದಾರ್ಥಗಳಿಗೆ ಇಂಗು ಹಾಕದೇ ಇದ್ದರೆ ರುಚಿಯೇ ಇರುವುದಿಲ್ಲ. ಪರಿಮಳದ ಜೊತೆಗೆ ತಿನಿಸುಗಳ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಉದರ ಬಾಧೆಗೆ ಇಂಗು ಅತ್ಯುತ್ತಮವಾದ ಮದ್ದು.
ನಿಮಗೆ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳಿದ್ದರೆ ಇಂಗನ್ನು ಸೇವಿಸಬಹುದು. ಇಂಗನ್ನು ಹೊಕ್ಕುಳಿಗೆ ಹಾಕಿಕೊಳ್ಳುವುದರಿಂದ ಅನೇಕ ಲಾಭಗಳಿವೆ. ನೀವು ದೀರ್ಘಕಾಲದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಹೊಕ್ಕುಳಿಗೆ ಇಂಗನ್ನು ಅನ್ವಯಿಸಿ. ಇದರಿಂದ ಹೊಟ್ಟೆನೋವಿನ ಸಮಸ್ಯೆ ದೂರವಾಗುತ್ತದೆ. 1 ಟೀ ಚಮಚ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸ್ವಲ್ಪ ಇಂಗನ್ನು ಸೇರಿಸಿ ಹೊಕ್ಕುಳಿಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಮಸಾಜ್ ಮಾಡಿ. ಇದರಿಂದ ನಿಮಗೆ ರಿಲೀಫ್ ಸಿಗುತ್ತದೆ.
ಹೊಕ್ಕುಳಿಗೆ ಇಂಗು ಹಚ್ಚುವುದರಿಂದ ಗ್ಯಾಸ್ ತೊಂದರೆಯೂ ಪರಿಹಾರವಾಗುತ್ತದೆ. ಹುಳಿ ತೇಗು, ಗ್ಯಾಸ್ಟ್ರಿಕ್ ಇದ್ದಾಗ ಹೊಕ್ಕುಳಿಗೆ ಇಂಗು ಹಚ್ಚಬೇಕು. ಇದಕ್ಕಾಗಿ ಸ್ವಲ್ಪ ಇಂಗನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಕಲಸಿ. ನಂತರ ಹತ್ತಿ ಉಂಡೆಯನ್ನು ತೆಗೆದುಕೊಂಡು ಅದರ ಸಹಾಯದಿಂದ ಹೊಕ್ಕುಳಿಗೆ ಪೇಸ್ಟ್ ಅನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ಅಜೀರ್ಣ, ಹುಳಿ ತೇಗು ಮತ್ತು ಗ್ಯಾಸ್‌ನಂತಹ ಸಮಸ್ಯೆಗಳು ದೂರವಾಗುತ್ತವೆ.
ಪ್ರತಿದಿನ ಹೊಕ್ಕಳಿಗೆ ಇಂಗು ಹಚ್ಚುವುದರಿಂದ ಹೊಟ್ಟೆ ತಂಪಾಗುತ್ತದೆ. ಎದೆಯುರಿ ಇರುವವರಿಗೂ ಇದರಿಂದ ಪರಿಹಾರ ಸಿಗುತ್ತದೆ. ಇಂಗಿಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿ, ನಂತರ ಆ ಪೇಸ್ಟ್ ಅನ್ನು ಹೊಕ್ಕುಳಿಗೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿದರೆ ಹೊಟ್ಟೆ ತಂಪಾಗುತ್ತದೆ.