
ಇಲ್ಲಿದೆ ನೋಡಿ ಮ್ಯಾಜಿಕಲ್ ಸೋಲಾರ್ ಕಾರು. ಈ ಕಾರು ಏನು ನೋಡೋದಕ್ಕೆ ಹೀಗಿದೆ ಅಂತ ಅಂದ್ಕೊಡ್ರಾ..! ಈ ಕಾರ್ನ ಸ್ಪೆಷಾಲಿಟಿನೇ ಅದು. ಇದನ್ನ ಸೋಲಾರ್ ಕಾರು ಅಂತ ಕರೆಯಬಹುದು. ಈ ಕಾರನ್ನ ಸೃಷ್ಟಿ ಮಾಡಿದವರು ಶ್ರೀನಗರ ಮೂಲದ ಬಿಲಾಲ್ ಅಹ್ಮದ್, ಇವರು ವೃತ್ತಿಪರ ಗಣಿತ ಶಿಕ್ಷಕರು. ಇವರು ಈಗ ಮೆಕಾನಿಕಲ್ ವಿಭಾಗದಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಕಾರೊಂದನ್ನ ಸೃಷ್ಟಿಸಿದ್ದಾರೆ. ನೋಡೋದಕ್ಕೆ ಕಾಮನ್ ಕಾರ್ನಂತೆ ಕಾಣಿಸಿದರೂ ಇದು ಇಂಧನ ಇಲ್ಲದೇ ಸೋಲಾರ್ ಶಕ್ತಿಯಿಂದ ಓಡಾಡುವ ಕಾರ್ ಆಗಿದೆ.
ಎಲೋನ್ ಮಸ್ಕ್ ಅತ್ತ ಸ್ವಯಂ ಚಾಲಿತ ಕಾರುಗಳನ್ನ ತಯಾರಿಸಿ ಎಲ್ಲರೂ ಶಾಕ್ ಆಗುವ ಹಾಗೆ ಮಾಡಿದ್ರೆ, ಇತ್ತ ಬಿಲಾಲ್ ಅಹ್ಮದ್ ಸೈಲೆಂಟಾಗಿ ಸೋಲಾರ್ನಿಂದ ಓಡಾಡೋ ಕಾರ್ನ್ನ ತಯಾರಿಸಿದ್ದಾರೆ. ಈ ವಿಶೇಷ ಕಾರು ಎಲ್ಲರ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ರಸ್ತೆ, ರಸ್ತೆಗಳಲ್ಲಿ ಇಂತಹ ಕಾರು ಓಡಾಡೋ ದಿನ ದೂರವಿಲ್ಲ. 11 ವರ್ಷ ಕಾರನ್ನ ಸೃಷ್ಟಿಸಲು ಕಾಲಾವಕಾಶ ತೆಗೆದುಕೊಂಡಿರೋ ಈ ಮ್ಯಾಥ್ಸ್ ಟೀಚರ್, ಸರಿಯಾಗಿ ಲೆಕ್ಕಾಚಾರ ಹಾಕಿ, ಕೊಂಚ ಮಾರ್ಡನ್ ಲುಕ್ ಕೂಡಾ ಕೊಟ್ಟಿದ್ಧಾರೆ. ಈಗ ಇವರ ಆಸೆ ಏನೆಂದರೆ ಈ ಕಾರು ಎಲ್ಲರ ಕೈಗೆಟಕುವ ಬೆಲೆಯಲ್ಲಿ ದೊರಕಲಿ ಅನ್ನೋದು.
ಆರಂಭದಲ್ಲಿ ಅವರು ವಿಶೇಷ ಚೇತನರಿಗೆ ವಾಹನವನ್ನು ನಿರ್ಮಿಸುವ ಗುರಿಯನ್ನ ಹೊಂದಿದ್ದರು. ಆದರೆ ಹಣದ ಕೊರತೆಯಿಂದಾಗಿ ಅವರ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಆದಾಗ್ಯೂ ಇಂಧನ ಬೆಲೆ ಏರಿಕೆಯ ಹೆಚ್ಚುತ್ತಿರುವ ರೀತಿಯನ್ನ ನೋಡಿಯೇ ಇವರು ಸೌರಶಕ್ತಿಯಿಂದ ಚಲಿಸುವ ಕಾರನ್ನು ನಿರ್ಮಿಸುವ ಯೋಚನೆ ರೂಪಿಸಿದ್ದಾರೆ.
15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಕಾರು ಸ್ಪೋರ್ಟ್ಸ್ ಕಾರಿನಂತೆ ವಿನ್ಯಾಸ ಮಾಡಲಾಗಿದೆ. ಸದ್ಯಕ್ಕೆ ಇದರಲ್ಲಿ ನಾಲ್ಕು ಜನರು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಈ ಕಾರನ್ನ ರೂಪಿಸಲಾಗಿದೆ. ಇನ್ನೂ ಒಂದು ಆಶ್ಚರ್ಯಕರ ವಿಚಾರ ಏನಂದ್ರೆ ಈ ಕಾರನ್ನ ತಯಾರಿಸಲು ಇವರು ಇಲ್ಲಿಯವರೆಗೂ ಯಾರಿಂದಲೂ ಒಂದು ರೂಪಾಯಿ ಕೂಡಾ ಸಹಾಯ ಪಡೆದಿಲ್ಲ ಅನ್ನೋದೇ ವಿಶೇಷ.