5 ಏಲಕ್ಕಿಯನ್ನು ಒಂದು ಪೇಪರ್ ನಲ್ಲಿಟ್ಟುಕೊಂಡು ಚೆನ್ನಾಗಿ ಜಜ್ಜಿಟ್ಟುಕೊಳ್ಳಿ, ಒಂದು ಸಣ್ಣ ತುಂಡು ಶುಂಠಿಯನ್ನು ತುರಿದಿಟ್ಟುಕೊಳ್ಳಿ.
ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಅದರ ಮೇಲೆ ತೆಳುವಾದ ಒಂದು ಬಟ್ಟೆ ಹಾಕಿ. ಪಾತ್ರೆಯ ಮೇಲೆ ಹಾಸಿದ ಬಟ್ಟೆ ಕೆಳಗಡೆ ನೀರಿಗೆ ತಾಕುವಂತೆ ಇರಲಿ. ನಂತರ ಪಾತ್ರೆಯ ಬಾಯಿಯನ್ನು ಬಟ್ಟೆ ಜತೆ ಸೇರಿಸಿ ಕಟ್ಟಿ.
ನಂತರ ಇದಕ್ಕೆ 3 ಚಮಚ ಟೀ ಪೌಡರ್, ಜಜ್ಜಿಟ್ಟುಕೊಂಡ ಶುಂಠಿ, ಏಲಕ್ಕಿ, ಬೆಲ್ಲ 3 ಟೀ ಚಮಚ ಹಾಕಿ. ನಂತರ ಕುಕ್ಕರ್ ತಳಕ್ಕೆ ಒಂದು ಲೋಟ ನೀರು ಹಾಕಿ ಒಂದು ಪ್ಲೇಟ್ ಇಡಿ.
ನಂತರ ಅದರ ಮೇಲೆ ಮಾಡಿಟ್ಟುಕೊಂಡು ಟೀ ಮಿಶ್ರಣದ ಪಾತ್ರೆಯನ್ನು ಇಟ್ಟು ಕುಕ್ಕರ್ ಮುಚ್ಚಿ 5 ವಿಷಲ್ ಕೂಗಿಸಿಕೊಳ್ಳಿ. ನಂತರ ಬಟ್ಟೆ ತೆಗೆದು ಪಾತ್ರೆಯಲ್ಲಿರುವ ಡಿಕಾಕ್ಷನ್ ಅನ್ನು ತೆಗೆದುಕೊಳ್ಳಿ.
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಲೋಟ ಹಾಲು ಹಾಕಿ ಕುದಿಸಿ. ನಂತರ ಈ ಟೀ ಡಿಕಾಕ್ಷನ್ ಸೇರಿಸಿ ಸ್ವಲ್ಪ ಹೊತ್ತು ಕುದಿಸಿದರೆ ಹೈದ್ರಾಬಾದಿ ಇರಾನಿ ಟೀ ಸವಿಯಲು ಸಿದ್ಧ.